ಇತ್ತೀಚಿನ ಉದಾಹರಣೆ ಎಂದರೆ ತೆಲಗು ಚಿತ್ರ ಜನತಾ ಗ್ಯಾರೇಜ್, ಈ ಚಿತ್ರ 350 ಚಿತ್ರನೃಮಂದಿರಗಳಲ್ಲಿ ತೆರೆ ಕಂಡಿದೆ. ಕನ್ನಡದಲ್ಲಿ ಈಗೀಗ ಹೊಸಬರ ಮೋಡಿ ಮಾಡುತ್ತಿರುವ ಸಂದರ್ಭದಲ್ಲಿ ಇಂತಹ ಸಮಸ್ಯೆ ಎದುರಾದರೆ, ಚಿತ್ರರಂಗದ ಗತಿ ಏನು...? ಉತ್ತಮ ಚಿತ್ರಗಳು ಪ್ರದರ್ಶನ ಕಾಣುತ್ತಿದ್ದರೂ, ವಾರಕ್ಕೆ ಎತ್ತಂಗಡಿ ಮಾಡಲಾಗುತ್ತದೆ. ಮಡಮಕ್ಕಿ ಚಿತ್ರಕ್ಕೆ ಒಳ್ಳೆಯ ಚಿತ್ರಗಳು ಬಂದಿದ್ದರೂ, ಚಿತ್ರಮಂದಿರ ಸಮಸ್ಯೆ ಎದುರಾಗಿದೆ. ಇಂತಹ ಸಿನಿಮಾಗಳನ್ನು ಉಳಿಸಿಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.