ನನ್ನನ್ನು 'ಅಮೀರ್ ಖಾನ್ ಸಹೋದರಿ 'ಎಂದು ಹೇಳಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ ಎಂದು ನಟಿ ಪ್ರಿಯಾಮಣಿ ಹೇಳಿಕೆ ನೀಡಿದ್ದಾರೆ. ಕಳೆದ ತಿಂಗಳು 28ರಂದು ಕೇರಳದಲ್ಲಿ ಜಿಶಾ ಎಂಬ ಯುವತಿ ಮೇಲೆ ದಲಿತ ಯುವಕನಿಂದ ಬರ್ಬರವಾಗಿ ರೇಪ್ ಆಗಿತ್ತು. ಇದು ಇಡೀ ದೇಶದಲ್ಲೆ ಸುದ್ದಿಗೆ ಗ್ರಾಸವಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಸಿನಿಮಾ ಜಗತ್ತಿನ ಕೆಲ ಸೆಲೆಬ್ರಿಟಿಗಳು ಧ್ವನಿ ಎತ್ತಿದ್ದರು.
ಸೌತ್ ಇಂಡಿಯನ್ ಫಿಲ್ಮಂ ಆ್ಯಕ್ಟರ್ ಪ್ರಿಯಾಮಣಿ ತುಂಬಾ ಗಂಭೀರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು... ಈ ಬಗ್ಗೆ ಟ್ವಿಟ್ ಮಾಡಿದ್ದ ಪ್ರಿಯಾಮಣಿ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ, ಹುಡುಗಿಯರು ದೇಶ ಬೀಡಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದರು.
ವೆಬ್ಸೈಟ್ ಜತೆಗೆ ಮಾತನಾಡಿರುವ ಪ್ರಿಯಾಮಣಿ, 'ನಾನು ಮಾಡಿರುವ ಟ್ವೀಟ್ ಬಗ್ಗೆ ನನಗೆ ಯಾವುದೇ ಪಶ್ಚಾತಾಪ ಇಲ್ಲ. ನಾನು ಸಮಾಜದ ನ್ಯೂನತೆಗಳನ್ನು ಹೊರತರುವುದಕ್ಕಾಗಿ ಈ ರೀತಿ ಟ್ವಿಟ್ ಮಾಡಿದ್ದೇನೆ'. ಪ್ರಿಯಾಮಣಿ ಹೇಳುವಂತೆ.. 'ದೇಶದಲ್ಲಿ ಪ್ರತಿಯೊಬ್ಬ ಹುಡುಗಿಗೂ ತನ್ನ ಅಭಿಪ್ರಾಯ ಹೇಳುವ ಹಕ್ಕಿದೆ. ಆದ್ದರಿಂದ ನನಗೆ ಹೆಮ್ಮೆ ಇದೆ ನನ್ನನ್ನು 'ಅಮೀರ್ ಖಾನ್ ಸಹೋದರಿ' ಎಂದು ಕರೆದಿರುವುದಕ್ಕೆ', 'ಅಮೀರ್ ಖಾನ್ ಎಂಬ ಮಹಾನ ವ್ಯಕ್ತಿಯ ಸಹೋದರಿ' ಎನ್ನುವುದಕ್ಕೆ ನಿಜಕ್ಕೂ ಹೆಮ್ಮೆ ಇದೆ ಎಂದಿದ್ದಾರೆ.