ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ಮಧ್ಯೆ ಮನಸ್ತಾಪವಾಗಿದೆ ಎಂದು ರೂಮರ್ಸ್ ಹರಡಿತ್ತು. ಇಬ್ಬರ ಮಧ್ಯೆ ಬಿರುಕು ಮೂಡಿದೆ ಎಂದು ಹೇಳಲಾಗ್ತಿತ್ತು. ಇದರ ಮಧ್ಯೆ ಇಂದು ಅಭಿಷೇಕ್ ನಾವಿಬ್ಬರು ಚೆನ್ನಾಗಿದ್ದೀವಿ, ನಮ್ಮಿಬ್ಬರ ಮದ್ಯೆ ಯಾವುದೇ ಮನಸ್ತಾಪವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ತಾರಾ ದಂಪತಿಗಳು ರೋಮ್ಯಾಂಟಿಕ್ ಆಗಿ ಲಾಂಗ್ ಡ್ರೈವ್ಗೆ ತೆರಳಿದ್ದು ಕಂಡು ಬಂತು.
ಮೂರು ದಿನಗಳ ಹಿಂದೆ ಐಶ್ ಬಹುನಿರೀಕ್ಷಿತ ಚಿತ್ರ ಸರಬ್ಜಿತ್ ಚಿತ್ರದ ಪ್ರಚಾರ ಸಮಾರಂಭದಲ್ಲಿ ತೊಡಗಿದ್ದರು.. ಈ ವೇಳೆ ಅಭಿಷೇಕ್ ಮತ್ತು ಐಶ್ ಕುಟುಂಬದ ಎಲ್ಲಾ ಸದಸ್ಯರು ಭಾಗಿಯಾಗಿದ್ದರು. ಆಗ ವೇದಿಕೆ ಮೇಲೆ ಮುಖ ಸಿಂಡರಿಸಿಕೊಂಡಿದ್ದ ಅಭಿಷೇಕ್, ಐಶ್ ಜತೆ ಸರಿಯಾಗಿ ನಿಲ್ಲಲು ಹಿಂದೇಟು ಹಾಕಿದ್ದರು.