'ಬಾದ್ ಶಾಹೋ' ಚಿತ್ರದ ಆಫರ್ ಬಿಚ್ಚಿಟ್ಟ ಐಶ್ವರ್ಯ ರೈ

ಶನಿವಾರ, 30 ಏಪ್ರಿಲ್ 2016 (18:57 IST)
ಬಾಲಿವುಡ್ ಅಂಗಳದಲ್ಲಿ ಹೊಸ ಚಿತ್ರಗಳಿಗೇನು ಬರವಿಲ್ಲ. ಬಿಗ್ ಬಜೆಟ್‌ನಲ್ಲಿ ಹೊಸ ಚಿತ್ರಗಳು ಹಾಗೂ ವಿವಾದವಿರುವ ಚಿತ್ರಗಳು ಸದ್ದು ಮಾಡುತ್ತಿವೆ. ಅಂಥ ಚಿತ್ರಗಳಲ್ಲಿ ಅಜಯ್ ದೇವಗನ್ ಅಭಿನಯದ 'ಬಾದ್ ಶಾಹೋ' ಚಿತ್ರವು ಕೂಡ ಒಂದು.. ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಮಿಲನ್ ಲೂತ್‌ರಿಯಾ.. ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಜಯ್ ದೇವಗನ್. ಆದರೆ ಚಿತ್ರಕ್ಕೆ ನಾಯಕಿಯರ ಬಗ್ಗೆ ಹಲವರ ಹೆಸರುಗಳು ಕೇಳಿ ಬರುತ್ತವೆ. ಇದಕ್ಕೆ ಐಶ್ವರ್ಯ ರೈ ಮಾತ್ರ ಹೊರತಾಗಿಲ್ಲ.. 
ಇನ್ನೂ 'ಬಾದ್ ಶಾಹೋ' ಚಿತ್ರದಲ್ಲಿ ನಟಿಸಲು ಐಶ್ವರ್ಯ ರೈ ಗೆ ಆಫರ್ ಬಂದಿತಂತೆ.. ಚಿತ್ರದ ಸ್ಟೋರಿ ಕೂಡ ಐಶ್ ನೋಡಿದ್ರಂತೆ, ಆದರೆ ಐಶ್ವರ್ಯ ರೈ ಬ್ಯೂಸಿ ಇರುವ ಕಾರಣ ಚಿತ್ರ ಸಹಿ ಹಾಕಲು ಸಾಧ್ಯವಾಗಿಲ್ಲ ಎಂದು ಐಶ್ವರ್ಯ ರೈ ಹೇಳಿಕೊಂಡಿದ್ದಾರೆ. 
 
ಹೀಗೆ ಒಂದರಿಂದ ಮತ್ತೊಂದು ಎನ್ನುತ್ತಾ ಈಗಾಗ್ಲೇ ನಾಲ್ಕು ನಟಿಯರು ಬಂದು ಹೋಗಿದ್ದಾರೆ. ಸದ್ಯಕ್ಕೆ ಬಾಲಿವುಡ್‌ನ ಹಾಟ್ ಬೆಡಗಿ ಇಷಾ ಗುಪ್ತಾ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಯನ್ನು ಚಿತ್ರ ತಂಡವೇ ಬಿಟ್ಟು ಕೊಟ್ಟಿದೆ. 
 
ಅಜಯ್ ಹಾಗೂ ಮಿಲಾನ್ ಲೂತ್‌ರಿಯಾ ಅವರು ಜತೆಯಾಗಿ ಕಾಣಿಸಿಕೊಳ್ಳುವ ಎರಡನೇ ಚಿತ್ರ ಇದಾಗಿದೆ. ಈ ಹಿಂದೆ ಒನ್ಸ್ ಆಪಾನ್ ಎ ಟೈಮ್ ಇನ್ ಮುಂಬಯಿ ಚಿತ್ರದಲ್ಲಿ ಇಬ್ಬರು ಕಾಣಿಸಿಕೊಂಡಿದ್ದರು.. ಚಿತ್ರ ಕೂಡ ಸಖತ್ ಕಲೆಕ್ಷನ್ ಮಾಡಿತ್ತು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ