ಕ್ಷೇತ್ರ -ಭಾಷೆಯನ್ನು ಪರಿಗಣಿಸದೆ ಚಿತ್ರದಲ್ಲಿ ನಟಿಸಿದ್ದೇನೆ : ಐಶ್ವರ್ಯ ರೈ

ಮಂಗಳವಾರ, 3 ಮೇ 2016 (15:48 IST)
ಕ್ಷೇತ್ರ ಹಾಗೂ ಭಾಷೆಯನ್ನು ಪರಿಗಣಿಸದೇ ಚಿತ್ರಗಳಲ್ಲಿ ನಟಿಸಿರುವುದು ಖುಷಿ ತಂದಿದೆ ಎಂದು ಮಾಜಿ ವಿಶ್ವ ಸುಂದರಿ, ಐಶ್ವರ್ಯ ರೈ ಬಚ್ಚನ್ ತಿಳಿಸಿದ್ದಾರೆ. ಎಲ್ಲಾ ತರದ ಚಿತ್ರಗಳಲ್ಲಿ ನಟಿಸಿದ್ದೇನೆ. ಆದ್ರೆ ಯಾವ ಚಿತ್ರಗಳಲ್ಲೂ ಭಾಷೆ ಹಾಗೂ ಕ್ಷೇತ್ರವನ್ನು ಪರಿಗಣಿಸದೆ ಎಲ್ಲಾ ಚಿತ್ರಗಳಲ್ಲಿ ನಟಿಸಿದ್ದೇನೆ ಎಂದಿದ್ದಾರೆ. 
ಪ್ರಿಯಾಂಕಾ ಛೋಪ್ರಾ ಹಾಗೂ ದೀಪಿಕಾ ಪಡುಕೋಣೆ ಹಾಗೇ ಐಶ್ವರ್ಯ ರೈ ಕೂಡ ಕೆಲ ಹಾಲಿವುಡ್ ಚಿತ್ರಗಲ್ಲಿ ನಟಿಸಿದ್ದಾರೆ. ಬ್ರೈಡ್ ಆಂಡ್ ಪ್ರಿಜೂಡೈಸ್, ಪಿಂಕ್ ಪಥರ್, ಮಿಸ್‌ಟ್ರೆಸ್ ಆಫ್ ಸ್ಪೆಸೈಸ್ ಗಳಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದರು.. 
 
ನಿರ್ದಿಷ್ಟ ಸ್ಥಳಕ್ಕೆ ಚಿತ್ರಗಳು ಸೀಮಿತವಾಗಿರುತ್ತವೆ ಎಂದು ನಾನು ನಂಬುವುದಿಲ್ಲ.. ನಾನು ವಿಭಿನ್ನ ಚಿತ್ರಗಳಲ್ಲಿ ನಟಿಸುವುದರಲ್ಲಿ ನಂಬಿಕೆ ಇಡುತ್ತೇನೆ ಎಂದು ಐಶ್ವರ್ಯ ರೈ ತಿಳಿಸಿದ್ದಾರೆ. 

ತಮ್ಮ ಅಮೋಘ ಅಭಿನಯದಿಂದ ಚಿತ್ರ ರಸಿಕರ ಮನಗೆದಿದ್ದ ನಟಿ ರೈ ಮುಂದಿನ ಚಿತ್ರ 'ಸರಬ್‌ಜಿತ್'ಗೆ ರೆಡಿಯಾಗಿದ್ದಾರೆ. ಜಜ್ಬಾ ಚಿತ್ರದ ಬಳಿಕ ವಿಭಿನ್ನ ಪಾತ್ರದಲ್ಲಿ ಐಶ್ ಕಾಣಿಸಿಕೊಳ್ಳಲಿದ್ದಾರೆ. 'ಸರಬ್‌ಜಿತ್' ಚಿತ್ರ ತೆರೆ ಕಾಣಲಿದ್ದು, 

ಈ ಹಿಂದೆ 'ಜಜ್ಬಾ' ಸಿನಿಮಾದಲ್ಲಿ ಲಾಯರ್ ಪಾತ್ರದಲ್ಲಿ ಮಿಂಚಿದ್ದ ಐಶ್ವರ್ಯ ರೈ, ಅದಾದ ಬಳಿಕ ಮುಂದಿನ ಚಿತ್ರ 'ಸರಬ್‌ಜಿತ್ 'ಚಿತ್ರಕ್ಕೆ ರೆಡಿಯಾಗಿದ್ದಾರೆ. ಚಿತ್ರದಲ್ಲಿ 'ಸರಬ್‌ಜಿತ್' ಸಹೋದರಿ ಪಾತ್ರದಲ್ಲಿ ಐಶ್ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ