ಮಾಜಿ ವಿಶ್ವಸುಂದರಿ, ಬಿಗ್ ಬಿ ಸೊಸೆ ಐಶ್ವರ್ಯಾ ರೈ ನಾಯಕಿಯಾಗಿ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದಲ್ಲಿ ಹಮ್ ದಿಲ್ ದೇ ಚುಚ್ಕೆ ಸನಮ್, ದೇವದಾಸ್, ಗುಜಾರಿಷ್ ಚಿತ್ರಗಳು ಬಾಕ್ಸಾಫೀಸಲ್ಲಿ ಒಳ್ಳೇ ಕಲೆಕ್ಷನ್ ಮಾಡಿದ್ದವು. ಈ ಚಿತ್ರಗಳಲ್ಲಿನ ಐಶ್ವರ್ಯಾ ರೈ ಅಭಿನಯ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು.
ಸುಮಾರು ಆರು ವರ್ಷಗಳ ಗ್ಯಾಪ್ ನಂತರ ಮತ್ತೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತಿದೆ. ಸಂಜಯ್ ಲೀಲಾ ಭನ್ಸಾಲಿ ಅವರ ಲೀಲಾವತಿ ಚಿತ್ರದಲ್ಲಿ ಐಶ್ವರ್ಯಾ ರೈ ಸ್ಪೆಷಲ್ ಸಾಂಗ್ ಕೊಟ್ಟಿದ್ದಾರಂತೆ. ಐತಿಹಾಸಿಕ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮಮತ್ತು ರಣವೀರ್ ಸಿಂಗ್, ಶಾಹಿದ್ ಕಪೂರ್ ಮುಖ್ಯಪಾತ್ರಗಳನ್ನು ಪೋಷಿಸಿದ್ದಾರೆ.