ವಿವಾದಕ್ಕೆ ಕಾರಣವಾಯ್ತು 'ಶಿವಯ್ಯ' ಚಿತ್ರದ ಪೋಸ್ಟರ್, ಲಾರ್ಡ್ ಶಿವಗೆ ಅವಮಾನ

ಗುರುವಾರ, 26 ಮೇ 2016 (14:37 IST)
ಅಜಯ್ ದೇವಗನ್ ಅಭಿನಯದ 'ಶಿವಯ್ಯ' ಚಿತ್ರದ ಪೋಸ್ಟರ್ ಇದೀಗ ವಿವಾದಕ್ಕೆ ಕಾರಣವಾಗಿದೆ.  ಲಾರ್ಡ್ ಶಿವನ ಭಾವಚಿತ್ರ ಮೇಲೆ ಅಜಯ್ ದೇವಗನ್ ತಮ್ಮ ಕಾಲಲ್ಲಿ ಶೂ ಧರಿಸಿ ಹತ್ತಿರುವುದರ ಬಗ್ಗೆ ಆರೋಪ ಕೇಳಿ ಬಂದಿದೆ. 

 
ಈ ಚಿತ್ರದಲ್ಲಿ ಅಜಯ್ ದೇವಗನ ತಮ್ಮ ಕಾಲನಲ್ಲಿ ಶೂ ಧರಿಸಿ ಲಾರ್ಡ್ ಶಿವನ ಭಾವಚಿತ್ರದ ಮೇಲೆ ಹತ್ತುತ್ತಿರುವುದರ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಅಜಯ್ ದೇವಗನ್‌ಗೆ ಮತ್ತಷ್ಟು ಸಂಕಷ್ಟ ಬಂದೊದಗಿದೆ. 
 
ಕೆಲ ದಿನಗಳ ಹಿಂದೆ ಶಿವಯ್ಯ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು, ಆ  ಪೋಸ್ಟರ್‌ನಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ರು.. ಆದ್ರೆ ಈ ಪೋಸ್ಟರ್‌ನಲ್ಲಿ ಅಜಯ್ ದೇವಗನ್ ಕಾಲಲ್ಲಿ ಶೂ ಧರಿಸಿ ಹತ್ತುತ್ತಿರುವುದರ ಬಗ್ಗೆ ಕೇಳಿ ಬಂದಿದ್ದು, ಇನ್ನೂ  ಆದ್ದರಿಂದ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕೇಸ್ ದಾಖಲು ಮಾಡಲಾಗಿದೆ. ದೆಹಲಿಯ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಲಾಗಿದೆ. 
 
ಇನ್ನೂ ಹಿಂದೂಗಳ ಆರಾಧ್ಯ ದೈವವಾಗಿರುವ ಲಾರ್ಡ್ ಶಿವ ಭಕ್ತರಿಗೆ ನೋವಾಗಿದ್ದು, ಅವರ ಭಾವನೆಗಳಿಗೆ ಅವಮಾನ ಮಾಡಿದ್ದಂತಾಗಿದ್ದು, ಮುಂದಿನ ದಿನಗಳಲ್ಲಿ ಅಜಯ್ ದೇವಗನ್ ಹಾಗೂ ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗಲಿದೆ ಎನ್ನಲಾಗ್ತಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ