Rakesh Poojary No More: ರಾಕೇಶ್‌ಗೆ ಅಂತಿಮ ನಮನ ಸಲ್ಲಿಸಿ, ಅಳುತ್ತಲೇ ಕೂತಾ ರಕ್ಷಿತಾ ಪ್ರೇಮ್‌, ಅನುಶ್ರೀ, ಕಿರುತೆರೆ ಕಲಾವಿದರು

Sampriya

ಸೋಮವಾರ, 12 ಮೇ 2025 (16:54 IST)
Photo Credit X
ಉಡುಪಿ: ರಿಯಾಲಿಟಿ ಶೋ ವಿನ್ನರ್, ಸಿನಿಮಾ ಮತ್ತು ಕಿರುತೆರೆಯ ನಟನೂ ಆಗಿದ್ದ ರಾಕೇಶ್ ಪೂಜಾರಿಯವರ ಅಕಾಲಿಕ ಸಾವು ಕರ್ನಾಟಕಕ್ಕೆ ಆಘಾತ ನೀಡಿದೆ.

ಇಡೀ ಚಿತ್ರರಂಗವೇ ರಾಕೇಶ್‌ ನಿಧನಕ್ಕೆ ಕಂಬನಿ ಮಿಡಿದಿದೆ. ಇನ್ನೂ ಮಗನನ್ನು ಕಳೆದುಕೊಂಡ ತಾಯಿ ಹಾಗೂ ಅಣ್ಣನನ್ನು ಕಳೆದುಕೊಂಡ ತಂಗಿಯ ದುಃಖವನ್ನು ನೋಡಕ್ಕೆ ಆಗುತ್ತಿಲ್ಲ. ‌‌

ಮರಣೋತ್ತರ ಪರೀಕ್ಷೆ ಬಳಿಕ ರಾಕೇಶ್ ಮೃತದೇಹವನ್ನು  ಫ್ಯಾಮಿಲಿಗೆ ಹಸ್ತಾಂತರ ಮಾಡಲಾಗಿದ್ದು, ಇದೀಗ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ನಟಿ ರಕ್ಷಿತಾ ಪ್ರೇಮ್‌, ನಿರೂಪಕಿ ಅನುಶ್ರೀ, ಕಿರುತೆರೆ ನಟ ನಟಿಯರು ರಾಕೇಶ್‌ಗೆ ಕಣ್ಣೀರ ನಮನ ಸಲ್ಲಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ