ನೀರಜ್ ಪಾಂಡೆ ಮುಂದಿನ ಚಿತ್ರದಲ್ಲಿ ಅಕ್ಷಯ್ ಕುಮಾರ್ ?

ಬುಧವಾರ, 20 ಜುಲೈ 2016 (19:36 IST)
ಇನ್ನೂ ಹೆಸರಿಡದ ನೀರಜ್ ಪಾಂಡೆ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನಟ ಅಕ್ಷಯ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 
ಮೂಲಗಳ ಪ್ರಕಾರ ಚಿತ್ರದ ಕುರಿತಂತೆ ನೀರಜ್ ಪಾಂಡೆ ಅಕ್ಷಯ್ ಕುಮಾರ್ ಜತೆಗೆ ಚರ್ಚೆ ನಡೆಸಿದ್ದು, ಸ್ಟೋರಿ ಬಗ್ಗೆ ಶೇರ್ ಮಾಡಿದ್ದಾರೆ. ಸ್ಟೋರಿ ಕುರಿತು ಐಡಿಯಾ ಹೇಳುವಂತೆ ಅಕ್ಕಿಗೆ ನೀರಜ್ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

 
ಚಿತ್ರದ ಸ್ಟೋರಿ ಅಕ್ಷಯ್ ಕುಮಾರ್‌ಗೆ ಇಷ್ಟವಾಗಿದೆಯಂತೆ. ಹಾಗಾಗಿ ತಡ ಮಾಡದೇ ಅವರು ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ಅಕ್ಕಿ ಡಿಫರೆಂಟ್ ರೋಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಹೌಸ್‌ಫುಲ್-3 ಬಳಿಕ ರುಸ್ತುಮ್ ಚಿತ್ರದ ನ್ಯೂ ಲುಕ್‌ನಲ್ಲಿ ಅಕ್ಕಿ ಕಾಣಿಸಿಕೊಂಡಿದ್ದಾರೆ. 'ರುಸ್ತುಮ್' ಚಿತ್ರ ತೆರೆ ಮೇಲೆ ಬರಲು ಸಜ್ಜಾಗಿದೆ.

 ಈ ಚಿತ್ರದಲ್ಲಿ ನೌಕಾಸೇನೆಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅಕ್ಷಯ್ ಈ ಹಿಂದೆ ತಮ್ಮ ಪಾತ್ರದ ಬಗ್ಗೆ ಟ್ವಿಟ್ ಮಾಡಿದ್ದರು. ರುಸ್ತುಮ್ ಚಿತ್ರ ಅಗಸ್ಟ್ 12ರಂದು ಬಿಡುಗಡೆಯಾಗಲಿದೆ.ಅಧಿಕಾರಿ ಪಾತ್ರದಲ್ಲಿ ಅಕ್ಷಯ್‌‌ರನ್ನು ನೋಡಲು ಅವರ ಅಭಿಮಾನಿಗಳ ಕಾತುರದಲ್ಲಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ