ಈ ವಿಡಿಯೋ ನೋಡಿ ಪೊಲೀಸ್ ಪೇದೆಗೆ ಸೆಲ್ಯೂಟ್ ಹೊಡೆದ ಅಕ್ಷಯ್

ಬುಧವಾರ, 28 ಸೆಪ್ಟಂಬರ್ 2016 (16:49 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಶೇರ್ ಮಾಡುತ್ತಾನೇ ಇರ್ತಾರೆ. ಇವತ್ತು ಕೂಡ ಅಕ್ಕಿ ಇಂಥದ್ದೇ ವಿಡಿಯೋ ಶೇರ್ ಮಾಡಿದ್ದಾರೆ. ನಟ ಅಕ್ಷಯ್ ಕುಮಾರ್ ಶೇರ್ ಮಾಡಿರುವ ವಿಡಿಯೋ ದಲ್ಲೇನಿದೆ. ಇಲ್ಲಿದೆ ವರದಿ.

 
ಈ ವಿಡಿಯೋದಲ್ಲಿ ನೋಡುವಹಾಗೇ ರೈಲು ಸ್ಟೇಷನ್ ಹತ್ತಿರ ಬಂದಾಗ ನಿಧಾನವಾಗಿ ಚಲಿಸುತ್ತಿತ್ತು. ಚಲಿಸುವ ಟ್ರೇನ್ ನಿಂದ ಇಳಿಯಲು ಯುವಕ-ಯುವತಿ ಪ್ರಯತ್ನ ಪಡುತ್ತಾರೆ.

ಟ್ರೇನ್ ನಿಂದ ಇಳಿಯುವ ವೇಳೆ ಇಬ್ಬರು ಕೆಳಗೆ ಬೀಳುತ್ತಾರೆ.ಈ ವೇಳೆ ಯುವತಿ ರೈಲ್ವೇ ಸ್ಟೇಷನಿನ ಪ್ಲಾಟ್ ಫಾರಂ ನಲ್ಲಿ ಸಿಕ್ಕಿಹಾಕಿಕೊಂಡಿರುತ್ತಾಳೆ. ಅಲ್ಲೇ ಇದ್ದ ಓರ್ವ ಪೊಲೀಸ್ ಪೇದೆ ಆ ಯುವತಿಯನ್ನು ನೋಡಿದ್ದಾರೆ. ಬಳಿಕ ಸಿಕ್ಕಿಹಾಕಿಕೊಂಡಿದ್ದ ಯುವತಿಯನ್ನು ತಕ್ಷಣಕ್ಕೆ ಎಳೆದು ಆಕೆಯ ಪ್ರಾಣ ರಕ್ಷಿಸಿದ್ದಾರೆ. 
 
ಈ ವಿಡಿಯೋವನ್ನು ಶೇರ್ ಮಾಡಿರುವ ನಟ ಅಕ್ಷಯ್ ಕುಮಾರ್ ಈ ಬಗ್ಗೆ ಬರೆದುಕೊಂಡಿದ್ದಾರೆ. 'ಇದನ್ನು ನೋಡಿದ ಬಳಿಕ ನನಗೆ ಏನು ಹೇಳಬೇಕು ಗೊತ್ತಾಗಲಿಲ್ಲ'. 'ಪೊಲೀಸ್ ಪೇದೆಗೆ ನನ್ನ ಸೆಲ್ಯೂಟ್', 'ನಾನು ಮುಂಚೆಯಿಂದಲು ಹೇಳುತ್ತಿದ್ದೇನೆ. ಈಗಲೂ ಹೇಳುತ್ತಿದ್ದೇನೆ. 'ಯೂನಿಪಾರ್ಮ್ ಧರಿಸಿರುವ ಇವರೆಲ್ಲಾ ನಿಜವಾದ ಹಿರೋಗಳು' ಎಂದು ತಿಳಿಸಿದ್ದಾರೆ. ಅಕ್ಕಿ ಶೇರ್ ಮಾಡಿದ ಕೆಲ ಗಂಟೆಗಳಲ್ಲೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ವೆಬ್ದುನಿಯಾವನ್ನು ಓದಿ