ಲಾಕ್ ಡೌನ್ ನಡುವೆಯೂ ಪತ್ನಿ ಜತೆ ಬೀದಿಗಿಳಿದ ನಟ ಅಕ್ಷಯ್ ಕುಮಾರ್

ಸೋಮವಾರ, 30 ಮಾರ್ಚ್ 2020 (09:27 IST)
ಮುಂಬೈ: ಕೊರೋನಾ ಹರಡುವಿಕೆ ತಡೆಗೆ ದೇಶವಿಡೀ ಲಾಕ್ ಡೌನ್ ಆಗಿದ್ದು, ಎಲ್ಲರೂ ಮನೆಯಲ್ಲೇ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ನಡುವೆಯೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪತ್ನಿ ಜತೆ ಕಾರಿನಲ್ಲಿ ಪ್ರಯಾಣಿಸುತ್ತಿರುವ ಫೋಟೋ ವೈರಲ್ ಆಗಿದೆ.


ಕೊರೋನಾ ಪರಿಹಾರಕ್ಕೆ 25 ಕೋಟಿ ನೆರವು ನೀಡಿ ಸುದ್ದಿಯಾಗಿದ್ದ ಅಕ್ಷಯ್ ಲಾಕ್ ಡೌನ್ ನಡುವೆಯೂ ಹೋಗಿದ್ದೆಲ್ಲಿಗೆ ಗೊತ್ತಾ? ಬೇರೆಲ್ಲಿಗೂ ಅಲ್ಲ, ಆಸ್ಪತ್ರೆಗೆ.

ತಾವೇ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಾರು ಚಲಾಯಿಸಿಕೊಂಡು ಪತ್ನಿಯ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅಕ್ಷಯ್ ಪತ್ನಿ ಟ್ವಿಂಕಲ್ ತಮ್ಮ ಕಾಲು ಮುರಿತಕ್ಕೊಳಗಾಗಿದ್ದು, ಇದಕ್ಕಾಗಿಯೇ ಆಸ್ಪತ್ರೆಗೆ ತೆರಳಿದ್ದಾಗಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ