25 ಸಾವಿರ ಕಾರ್ಮಿಕರಿಗೆ ನೆರವಾಗಲಿರುವ ನಟ ಸಲ್ಮಾನ್ ಖಾನ್

ಸೋಮವಾರ, 30 ಮಾರ್ಚ್ 2020 (09:21 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ಚಿತ್ರರಂಗದ ಕೆಲಸಗಳು ನಡೆಯುತ್ತಿಲ್ಲ. ಇದರಿಂದಾಗಿ ಚಿತ್ರರಂಗದ ಕಾರ್ಮಿಕ ವರ್ಗಕ್ಕೆ ತೀವ್ರ ಸಂಕಷ್ಟ ಎದುರಾಗಿದೆ. ಈ ಕಾರ್ಮಿಕರಿಗೆ ಇದೀಗ ನಟ ಸಲ್ಮಾನ್ ಖಾನ್ ನೆರವಾಗಲಿದ್ದಾರೆ.


ಸ್ಟಾರ್ ನಟರೆಲ್ಲರೂ ಒಬ್ಬೊಬ್ಬರಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪರಿಹಾರ ಧನ ದೇಣಿಗೆ ನೀಡುತ್ತಿದ್ದರೆ ನಟ ಸಲ್ಮಾನ್ ಇನ್ನೊಂದು ರೀತಿಯಲ್ಲಿ ನೆರವಾಗಲಿದ್ದಾರೆ.

ಲಾಕ್ ಡೌನ್ ನಿಂದಾಗಿ ನಿತ್ಯದ ಕೂಳಿಗೆ ಪರದಾಡುತ್ತಿರುವ ಚಿತ್ರರಂಗದ ಸುಮಾರು 25 ಸಾವಿರ ಕಾರ್ಮಿಕರ ಕುಟುಂಬಕ್ಕೆ ಸಲ್ಮಾನ್ ತಮ್ಮ ಬೀಯಿಂಗ್ ಹ್ಯೂಮನ್ ಫೌಂಡೇಷನ್ ಮೂಲಕ ನೆರವಾಗಲಿದ್ದಾರಂತೆ. ಇವರಿಗೆ ದಿನಸಿ, ಇತ್ಯಾದಿ ಅಗತ್ಯ ವಸ್ತುಗಳನ್ನು ಪೂರೈಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ