ಕೋಟ್ಯಂತರ ರೂಪಾಯಿ ಕಾರಿದ್ದರು ಆಟೋ ಏರಿದ ಆಲಿಯಾ ಭಟ್‌, ಸರಳತೆಗೆ ಮನಸೋತ ನೆಟ್ಟಿಗರು

Sampriya

ಭಾನುವಾರ, 8 ಡಿಸೆಂಬರ್ 2024 (19:12 IST)
Photo Courtesy X
ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಆಲಿಯಾ ಭಟ್ ಅವರಲ್ಲಿ ಕೋಟ್ಯಂತರ ರೂಪಾಯಿ ಕಾರು ಇದ್ದರೂ ಆಟೋದಲ್ಲಿ ಪ್ರಯಾಣ ಮಾಡಿ ಇದೀಗ ಸುದ್ದಿಯಾಗಿದ್ದಾರೆ.

ಶನಿವಾರ (ಡಿಸೆಂಬರ್​ 7) ಸಂಜೆ ಆಲಿಯಾ ಭಟ್ ಅವರು ಮುಂಬೈನಲ್ಲಿ ಆಟೋ ಸವಾರಿ ಮಾಡಿದ ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ನೋಡಿದ ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ಇದನ್ನು ನಾಟಕ ಎಂದಿದ್ದಾರೆ, ಇನ್ನೂ ಕೆಲವರು ಆಲಿಯಾ ಭಟ್​ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಲಿಯಾ ಭಟ್​ ಅವರು ಸರಳತೆಯನ್ನು ತೋರ್ಪಡಿಸುವ ಸಲುವಾಗಿ ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ ಎಂಬುದು ಕೆಲವರ ವಾದ. ಆದರೆ ಅಸಲಿ ವಿಚಾರ ಬೇರೆ ಇದೆ. ಅವರು ಹೋಗಬೇಕಿದ್ದ ದಾರಿ ತುಂಬ ಕಿರಿದಾಗಿದೆ. ಹಾಗಾಗಿ, ಅಷ್ಟು ಚಿಕ್ಕ ರಸ್ತೆಯಲ್ಲಿ ದೊಡ್ಡ ಕಾರುಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆ ಕಾರಣದಿಂದಲೇ ಅವರು ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ.

ಆಲಿಯಾ ಭಟ್ ಜೊತೆ ಅವರ ಬಾಡಿ ಗಾರ್ಡ್ಸ್​ ಕೂಡ ಇದ್ದರು. ಆಲಿಯಾ ಅವರನ್ನು ಕಂಡ ಪಾಪರಾಜಿಗಳು ಫೋಟೋ, ವಿಡಿಯೋ ಸಲುವಾಗಿ ಫಾಲೋ ಮಾಡಿದ್ದಾರೆ. ತಮಗಾಗಿ ಒಂದು ಪೋಸ್ ನೀಡುವಂತೆ ಪಾಪರಾಜಿಗಳು ಮನವಿ ಮಾಡಿದ್ದಾರೆ.

ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಆಲಿಯಾ ಭಟ್ ಅವರು ಗುರುತಿಸಿಕೊಂಡಿದ್ದಾರೆ. ಅವರು ನಟಿಸಿದ ಅನೇಕ ಸಿನಿಮಾಗಳು ಸೂಪರ್​ ಹಿಟ್ ಆಗಿವೆ. ಸಖತ್ ಬೇಡಿಕೆ ಇರುವಾಗಲೇ ಅವರು ರಣಬೀರ್​ ಕಪೂರ್​ ಜೊತೆ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಈ ಜೋಡಿಗೆ ರಹಾ ಹೆಸರಿನ ಹೆಣ್ಣು ಮಗು ಇದೆ. ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಎರಡನ್ನೂ ಆಲಿಯಾ ಭಟ್​ ಅವರು ಸರಿ ದೂಗಿಸಿಕೊಂಡು ಸಾಗುತ್ತಿದ್ದಾರೆ. ಹಲವು ಸಿನಿಮಾಗಳ ಆಫರ್​ ಅವರ ಕೈಯಲ್ಲಿ ಇವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ