ಹೃತಿಕ್ -ಸಲ್ಮಾನ್ ಖಾನ್ ಮಧ್ಯೆ ಕೋಲ್ಡ್ ವಾರ್

ಶುಕ್ರವಾರ, 1 ಜುಲೈ 2016 (13:36 IST)
ಹೃತಿಕ್ ಹಾಗೂ ಸಲ್ಮಾನ್ ಖಾನ್ ಮಧ್ಯೆ ವೈಮನಸ್ಸು ಇರುವುದು ಕೇಳಿ ಬಂದಿದೆ. ಇಚೆಗಷ್ಟೇ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಹಲವು ನಟರು ಹಾಗೂ ಬಾಲಿವುಡ್ ಮಂದಿ ಹಾಜರಾಗಿದ್ದರು. ಈ ವೇಳೆ ಡ್ಯಾನ್ಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಲ್ಮಾನ್ ಖಾನ್ ಕೂಡ ಡ್ಯಾನ್ಸ್ ಮಾಡುತ್ತಿದ್ದರು.ಈ ವೇಳೆ ಎಲ್ಲಾ ನಟರು ಸ್ಟೇಜ್ ಮೇಲೆ ಬಂದು ಸ್ಟೆಪ್ ಹಾಕಿದ್ರು. ಆದ್ರೆ ಈ ವೇಳೆ ಹೃತಿಕ್ ರೋಷನ್ ಹೊರ ನಡೆದಿರುವುದು ತಿಳಿದು ಬಂದಿದೆ. '

ಇನ್ನು ಐಫಾ ಅವಾರ್ಡ್ಸ್ ಫಂಕ್ಷನ್ ನಲ್ಲಿ ಹೃತಿಕ್ ರೋಷನ್ ಅವರು ಡ್ಯಾನ್ಸ್ ಮಾಡಿದ್ರು.ಆದ್ರೆ ಡ್ಯಾನ್ಸ್ ಮಾಡೋ ಮೊದಲು ಹೃತಿಕ್ ಅವರು ತುಂಬಾನೇ ನರ್ವಸ್ ಆಗಿದ್ರಂತೆ.ಅದಕ್ಕೆ ಕಾರಣ ಆ ಪರ್ಫಾಮೆನ್ಸ್ ನ್ನು ಅವರ ಮಕ್ಕಳು ನೋಡುತ್ತಾರೆ ಅನ್ನೋದು.

ಅದಕ್ಕೆ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾರೆ ಅಂತಾ ಹೃತಿಕ್ ಕಾಯುತ್ತಿದ್ದರಂತೆ. ನಾನು ಯಾರ ಮುಂದೆ ಪರ್ಫಾಮೆನ್ಸ್ ಮಾಡೋದಕ್ಕೆ ಹಿಂದೇಟು ಹಾಕೋದಿಲ್ಲ.ಆದ್ರೆ ಮಕ್ಕಳ ಮುಂದೆ ಮಾಡೋವಾಗ ತುಂಬಾನೇ ನರ್ವಸ್ ಆಗಿದ್ದೆ ಅಂತಾ ಅವರು ಹೇಳಿದ್ದರು. 

ನಟಿ ಕಂಗನಾ ರನೌತ್ ಹಾಗೂ ಹೃತಿಕ್ ರೋಷನ್ ನಡುವಿನ ಜಗಳ ತಿಂಗಳ ಹಿಂದೆ ಎಲ್ಲೆಡೆ ಭಾರೀ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಕಂಗನಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ರು.ಆದ್ರೆ ಹೃತಿಕ್ ರೋಷನ್ ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದ್ರೀಗ ತುಂಬಾ ದಿನಗಳ ನಂತರ ಹೃತಿಕ್ ಮೌನ ಮುರಿದಿದ್ದರು ಇದೇ ವೇಳೆ ಹೇಳಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ