ಅಲ್ಲು ಅರ್ಜುನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅಲ್ಲು ಅರವಿಂದ್

ಶನಿವಾರ, 9 ಜುಲೈ 2016 (15:16 IST)
ನಿರ್ಮಾಪಕ ಅಲ್ಲು ಅರವಿಂದ್ ತಮ್ಮ ಪುತ್ರ ಖ್ಯಾತ ನಟ ಅಲ್ಲು ಅರ್ಜುನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಚೆಗಷ್ಟೇ ತೆರೆಕಂಡ ತೆಲಗು ಚಿತ್ರ' ಸರೈನೋಡು' ಅಲ್ಲು ಅರ್ಜುನ್ ಗಲ್ಲಾಪೆಟ್ಟಿಗೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿತ್ತು. ಅಲ್ಲದೇ ಅಲ್ಲು ನಟಿಸಿದ್ದ ಚಿತ್ರಗಳಲ್ಲೇ 'ಸರೈನೋಡು' ಚಿತ್ರ ಬಿಗ್ ಹಿಟ್ ತಂದುಕೊಟ್ಟಿತ್ತು.

ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಮೂಡಿ ಬಂದ 'ಸರೈನೋಡು' ಚಿತ್ರ ಅತಿ ಹೆಚ್ಚು ಗಳಿಕೆ ಕಂಡಿದ್ದು, ಹಾಗೂ ಚಿತ್ರ ಬಿಗ್ ಹಿಟ್ ನೀಡಿದ್ದು ಖುಷಿಯಾಗಿದೆ ಎಂದು ಅಲ್ಲು ತಂದೆ ಅಲ್ಲು ಅರವಿಂದ್ ತಿಳಿಸಿದ್ದಾರೆ. 
 
ಇನ್ನೂ 'ರುದ್ರಮ್ಮದೇವಿ' ಚಿತ್ರದಲ್ಲಿ ಅಮೋಘ ಅಭಿನಯಕ್ಕಾಗಿ ಅಲ್ಲು ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ನಾನು ಈ ಚಿತ್ರದಲ್ಲಿ ಸಂಪೋರ್ಟಿಂಗ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಇಂಥ ಚಿತ್ರಗಳು ಮತ್ತೆ ತೆರೆ ಮೇಲೆ ಬರಬೇಕು. ಈ ಚಿತ್ರದಲ್ಲಿ ನಾನು ನಟಿಸಿರುವುದಕ್ಕೆ ಪ್ರೇಕ್ಷಕರಿಂದ ಅಪಾರ ಪ್ರೀತಿ ದೊರಕಿದೆ ಎಂದು ಅಲ್ಲು ಅರ್ಜುನ್ ತಿಳಿಸಿದ್ದಾರೆ. 
 
ಹರೀಶ್ ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಇನ್ನೂ ಚಿತ್ರಕ್ಕೆ ಹೆಸರಿಟ್ಟಿಲ್ಲ. ಟ
ತಮ್ಮ ಚಿತ್ರ ಸರೈನೋಡು ಪ್ರಚಾರಕ್ಕಾಗಿ ಅಲ್ಲು ಅರ್ಜುನ್ ಬೆಂಗಳೂರಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ