ಹುಟ್ಟುಹಬ್ಬ ದಿನದಂದು ಇನ್ ಸ್ಟಾಗ್ರಾಮ್‍ಗೆ ಎಂಟ್ರಿಕೊಟ್ಟಿದ್ದ ಅಮೀರ್ ಖಾನ್ ಅವರಿಗೆ ಅಭಿಮಾನಿಗಳಿಂದ ದೊರೆತ ಉಡುಗೊರೆ ಏನು ಗೊತ್ತಾ?

ಗುರುವಾರ, 15 ಮಾರ್ಚ್ 2018 (07:04 IST)
ಮುಂಬೈ : ಇಲ್ಲಿಯವರೆಗೆ ಇನ್ ಸ್ಟಾಗ್ರಾಮ್‍ಗೆ ಎಂಟ್ರಿಕೊಡದ ಬಾಲಿವುಡ್ ನಟ ಅಮೀರ್ ಖಾನ್ ಅವರು ತಮ್ಮ ಹುಟ್ಟುಹಬ್ಬ ದಿನದಂದು ಇನ್ ಸ್ಟಾಗ್ರಾಮ್‍ಗೆ ಎಂಟ್ರಿಕೊಟ್ಟಿದ್ದು, ಅಲ್ಲಿ ಅವರಿಗೆ ಅಭಿಮಾನಿಗಳಿಂದ ಅಚ್ಚರಿಯ ಉಡುಗೊರೆ ದೊರೆತಿದೆ.


ಅದೇನೆಂದರೆ ನಟ ಅಮೀರ್ ಖಾನ್ ಅವರು ತಮ್ಮ 53 ನೇ ಹುಟ್ಟು ಹಬ್ಬದ ದಿನವಾದ ಬುಧವಾರ(ನಿನ್ನೆ) ದಂದು ಇನ್ ಸ್ಟಾಗ್ರಾಮ್‍ಗೆ ಎಂಟ್ರಿಕೊಟ್ಟಿದ್ದು, ಇನ್ ಸ್ಟಾಗ್ರಾಮ್ ತೆರೆದ ಸ್ವಲ್ಪ ಸಮಯದಲ್ಲೇ 2.35 ಲಕ್ಷ ಫಾಲೋವರ್ಸ್ ಗಳನ್ನು ಗಳಿಸಿದ್ದಾರೆ. ಅಭಿಮಾನಿಗಳ ಈ ಪ್ರತಿಕ್ರಿಯೆಯನ್ನು ಕಂಡು ಅವರು ಸಂತಸ ವ್ಯಕ್ತಪಡಿಸಿದ್ದಾರೆ.


ಅಮೀರ್ ಖಾನ್ ಅವರು ತಮ್ಮ ಅಮೋಘ ನಟನೆಯ ಮೂಲಕ ಭಾರತದಲ್ಲಿ ಮಾತ್ರವಲ್ಲ ಚೀನಾ, ಟರ್ಕಿ, ತೈವಾನ್ ಮತ್ತು ರಷ್ಯಾಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೇ ಇವರು ಟ್ವಿಟ್ಟರ್ ನಲ್ಲಿ 2.3 ಕೋಟಿ ಹಾಗೂ, ಫೇಸ್ ಬುಕ್ ನಲ್ಲಿ 1.53 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ