ಕಿಚ್ಚ ಸುದೀಪ್ ಬರ್ತ್ ಡೇ ಹಿಂದಿನ ದಿನ ಇಲ್ಲಿ ಅಭಿಮಾನಿಗಳಿಗೆ ಸಿಗ್ತಾರೆ
ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ ಬರ್ತ್ ಡೇ. ಈ ಬಾರಿ ಅಮ್ಮನಿಲ್ಲದೇ ಸುದೀಪ್ ಮೊದಲ ಬರ್ತ್ ಡೇ. ಹೀಗಾಗಿ ಅವರು ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿಕೊಳ್ಳುವ ಮೂಡ್ ನಲ್ಲಿಲ್ಲ. ಆದರೆ ಅಭಿಮಾನಿಗಳ ಸಂಭ್ರಮ ನೋಡಿ ಅವರ ಜೊತೆ ಕಾಲ ಕಳೆಯು ತೀರ್ಮಾನಿಸಿದ್ದಾರೆ.
ಆದರೆ ತಮ್ಮ ಮನೆ ಎದುರು ಸೆಪ್ಟೆಂಬರ್ 2 ರಂದು ಹುಟ್ಟುಹಬ್ಬ ಆಚರಿಸುತ್ತಿಲ್ಲ. ಆ ದಿನ ಮನೆ ಬಳಿ ಬರಬೇಡಿ ಎಂದು ಸುದೀಪ್ ಈಗಾಗಲೇ ಹೇಳಿದ್ದಾರೆ. ಅದರ ಬದಲು ಸೆಪ್ಟೆಂಬರ್ 1 ರ ರಾತ್ರಿ ಸಿಗುವುದಾಗಿ ಹೇಳಿದ್ದರು. ಅದೀಗ ಎಲ್ಲಿ ಸಿಗುತ್ತಿದ್ದಾರೆ ಎನ್ನುವುದು ಬಹಿರಂಗವಾಗಿದೆ.
ಸೆಪ್ಟೆಂಬರ್ 9 ರಂದು ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ ನಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಗಲಿದ್ದಾರೆ. ಆದರೆ ಹುಟ್ಟುಹಬ್ಬ ಆಚರಿಸಲು ಬರುವವರು ಯಾರೂ ಕೇಕ್, ಹಾರ ಏನೂ ತರಬಾರದು ಎಂದೂ ಸೂಚನೆ ನೀಡಲಾಗಿದೆ.