ಶೇ.25ರಷ್ಟು ಚೆನ್ನಾಗಿರುವ ಲಿವರ್‌ನಿಂದ ಜೀವಂತವಾಗುಳಿದಿರುವ ಅಮಿತಾಬ್ ಬಚ್ಚನ್

ಮಂಗಳವಾರ, 24 ನವೆಂಬರ್ 2015 (10:47 IST)
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತಾವು ಶೇ. 25ರಷ್ಟು ಚೆನ್ನಾಗಿರುವ ಲಿವರ್‌ನಿಂದ ಬದುಕುತ್ತಿದ್ದು, ಶೇ. 75ರಷ್ಟು ಲಿವರ್ ಮಾರಕ ಹೆಪಾಟೈಟಿಲ್ ಬಿ ವೈರಸ್‌ನಿಂದ ಕಳೆದುಕೊಂಡಿದ್ದೇನೆ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗ ಮಾಡಿದ್ದಾರೆ. ಹೆಪಾಟೈಟಿಸ್ ಕುರಿತು ಮಾಧ್ಯಮ ಪ್ರಚಾರದ ಚಾಲನೆಯಲ್ಲಿ ಮಾತನಾಡುತ್ತಿದ್ದ ಅವರು ತಾವು ಹೆಪಾಟೈಟಿಸ್ ಬಿ ಕಾಯಿಲೆಗೆ ಹೇಗೆ ಒಳಗಾದರೆಂಬುದನ್ನು ತಿಳಿಸಿದರು.

ಹೆಪಾಟೈಟಿಸ್ ಬಿ ತಮಗೆ ಆಕಸ್ಮಿಕವಾಗಿ ಬಂದಿದೆ. ಕೂಹಲವು ವರ್ಷಗಳಿಂದ ನಿರಂತರ ಚಿಕಿತ್ಸೆ ಪಡೆಯುತ್ತಿದ್ದೇನೆ. ಕೂಲಿ ಚಿತ್ರೀಕರಣವೇಳೆ ತಮ್ಮ ಹೊಟ್ಟೆಗೆ ಪೆಟ್ಟಾಗಿ ತೀವ್ರ ಗಾಯವಾಗಿತ್ತು. ಸುಮಾರು 200 ಜನರು ನನಗೆ ರಕ್ತದಾನ ಮಾಡಿದ್ದು,  60 ಸೀಸೆ ರಕ್ತವನ್ನು ನನ್ನ ದೇಹಕ್ಕೆ ನೀಡಲಾಯಿತು.  ಹೆಪಟೈಟಿಸ್ ಬಿ ರೋಗಿಯ ರಕ್ತವನ್ನು ಕೊಟ್ಟಿದ್ದರಿಂದ ನನ್ನ ಲಿವರ್ ಹಾಳಾಗಿತ್ತು.

2000ದವರೆಗೆ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದ್ದ ತನಗೆ ವೈದ್ಯಕೀಯ ಪರೀಕ್ಷೆಯಲ್ಲಿ ನನ್ನ ಲಿವರ್ ಶೇ. 75ರಷ್ಟು ಕೆಟ್ಟುಹೋಗಿರುವ ಸಂಗತಿ ತಿಳಿಯಿತು. ಸದ್ಯ ನನ್ನ ದೇಹದ ಲಿವರ್ ಶೇ. 75ರಷ್ಟು ಹಾಳಾಗಿದೆ. ಶೇ. 25ರಷ್ಟು ಚೆನ್ನಾಗಿರುವ ಲಿವರ್‌ನಿಂದ ತಾನು ಜೀವಂತವಾಗಿದ್ದೇನೆ ಎಂದು ಬಾಲಿವುಡ್ ಖ್ಯಾತ ಚಿತ್ರನಟ ಅಮಿತಾಬ್ ಬಚ್ಚನ್ ತಮ್ಮ ಆರೋಗ್ಯದ ಸ್ಥಿತಿಯನ್ನು ಬಿಚ್ಚಿಟ್ಟರು. 

ವೆಬ್ದುನಿಯಾವನ್ನು ಓದಿ