ಸಚಿನ್, ನಾಗಾರ್ಜುನ್ ಜತೆಗಿರುವುದೇ ಗೌರವ: ಅಮಿತಾಭ್ ಬಚ್ಚನ್

ಶನಿವಾರ, 5 ನವೆಂಬರ್ 2016 (09:14 IST)
ಮುಂಬೈ:  ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ಜತೆ ಒಂದೇ ವೇದಿಕೆಯಲ್ಲಿ ಇರುವುದೇ ನನಗೆ ದೊಡ್ಡ ಗೌರವ ಎಂದು ಬಿಗ್ ಬಿ ಅಮಿತಾಭ್ ಬಚ್ಚನ್ ಹೇಳಿಕೊಂಡಿದ್ದಾರೆ.

ಕಲ್ಯಾಣ್ ಜ್ಯುವಲ್ಲರ್ಸ್ ಜಾಹೀರಾತು ಚಿತ್ರೀಕರಣಕ್ಕೆ ಇವರೆಲ್ಲರೂ ಜತೆಯಾಗಿ ಒಂದೇ  ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮಮ್ಮೂಟ್ಟಿ, ಜಯರಾಂ ಮೊದಲಾದವರೂ ಇದ್ದರು.

ನಾಗಾರ್ಜುನ್  ಜತೆಗೆ ಅಮಿತಾಭ್ ಈಗಾಗಲೇ “ಅಗ್ನಿ ವರ್ಷ”, ಖುದಾ ಗವಾ” ಮತ್ತು “ಕಾಲಾ ಪತ್ಥರ್” ನಂತಹ ಚಿತ್ರಗಳಲ್ಲಿ ನಟಿಸಿದ್ದರು.  ಸಚಿನ್ ಜತೆಗೆ ಅಮಿತಾಭ್ ಗೆ ಹಿಂದಿನಿಂದಲೂ ಉತ್ತಮ ಸ್ನೇಹ ಬಂಧವಿದೆ.

ಇವರೊಂದಿಗೆ ಒಂದೇ ವೇದಿಕೆಯಲ್ಲಿರುವ ಛಾಯಾಚಿತ್ರವನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿರುವ ಬಚ್ಚನ್ ತಮಗಾದ ಖುಷಿಯನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ