ವಿಶ್ವಕಪ್ ಭಾರತಕ್ಕೆ ಶಿಫ್ಟ್ ಆಗಬೇಕು ಎಂದ ಅಮಿತಾಭ್ ಬಚ್ಚನ್! ಕಾರಣ ಕೇಳಿದ್ರೆ ನಗು ಬರದೇ ಇರದು!

ಶನಿವಾರ, 15 ಜೂನ್ 2019 (09:56 IST)
ಮುಂಬೈ: ಇಂಗ್ಲೆಂಡ್ ನಲ್ಲಿ ಮಳೆಯಿಂದಾಗಿ ವಿಶ್ವಕಪ್ ಪಂದ್ಯಗಳು ರದ್ದಾಗುತ್ತಿರುವುದು ಅಭಿಮಾನಿಗಳಲ್ಲಿ ಹತಾಶೆ ಮೂಡಿಸಿದೆ. ಈ ನಡುವೆ ಬಾಲಿವುಡ್ ಬಿಗ್ ಅಮಿತಾಭ್ ಬಚ್ಚನ್ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ.


ಐಸಿಸಿ ವಿಶ್ವಕಪ್ ನಂತಹ ಮಹತ್ವದ ಟೂರ್ನಿಯನ್ನು ಈ ಮಳೆಗಾಲದಲ್ಲಿ ಇಂಗ್ಲೆಂಡ್ ನಂತಹ ದೇಶದಲ್ಲಿ ಆಡಿಸಿ ಮೂರ್ಖತನ ತೋರಿದೆ ಎಂದು ಅಭಿಮಾನಿಯೊಬ್ಬರು ಮಾಡಿದ ಟ್ವೀಟ್ ಗೆ ಅಮಿತಾಭ್ ತಮಾಷೆಯಾಗಿಯೇ ಪ್ರತಿಕ್ರಿಯಿಸಿದ್ದಾರೆ.

‘ಹೌದು ವಿಶ್ವಕಪ್ ಭಾರತಕ್ಕೆ ಶಿಫ್ಟ್ ಆಗಬೇಕು. ನಮಗೆ ಇಲ್ಲಿ ಸೆಖೆ ತಡೆಯಲಾಗುತ್ತಿಲ್ಲ. ಇಲ್ಲಿಗೆ ಮಳೆ ಬರಲಿ’ ಎಂದು ಅಮಿತಾಭ್ ತಮಾಷೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ