ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

Sampriya

ಸೋಮವಾರ, 27 ಅಕ್ಟೋಬರ್ 2025 (19:26 IST)
Photo Credit X
ಕಾಂತಾರ: ಅಕ್ಟೋಬರ್ 2ರಂದು ದೊಡ್ಡ ಪರದೆ ಮೇಲೆ ಅಪ್ಪಳಿಸಿದ ಕಾಂತಾರ ಚಾಪ್ಟರ್ 1 ದೇಶ ವಿದೇಶದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲು ಡೇಟ್ ಫಿಕ್ಸ್ ಆಗಿದೆ. 

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌ 1 ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇನ್ನೊಂದು ಖುಷಿ ಸಂಗತಿ ಎಂದರೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡುಗಡೆ ಮಾಡಲಾಗುವುದು ಎಂದು ಅಮೆಜಾನ್‌ ಪ್ರೈಮ್‌ ಅಧಿಕೃತವಾಗಿ ತಿಳಿಸಿದೆ.

ಕಾಂತಾರದ ಎಲ್ಲಾ ಭಾಷೆಗಳ ಒಟಿಟಿ ಹಕ್ಕುಗಳನ್ನು ಅಮೆಜಾನ್‌ ಪಡೆದುಕೊಂಡಿದ್ದರೂ ಹಿಂದಿ ಭಾಷೆಗೆ ಡಬ್‌ ಆಗಿರುವ ಸಿನಿಮಾ ರಿಲೀಸ್‌ ಆಗುತ್ತಿಲ್ಲ. ಉತ್ತರ ಭಾರತದ ಮಾರುಕಟ್ಟೆಯಲ್ಲಿ ಈಗಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವುದರಿಂದ ನವೆಂಬರ್ ಕೊನೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. 

ಬಿಡುಗಡೆಯಾಗಿ 25 ದಿನ ಕಳೆದರೂ ಕಾಂತಾರ ಕ್ರೇಜ್‌ ಇನ್ನೂ ಕಡಿಮೆಯಾಗಿಲ್ಲ. ನಾಲ್ಕನೇ ವಾರಕ್ಕೆ ಕಾಲಿಟ್ಟರೂ ಈಗಲೂ ಬುಕ್‌ಮೈಶೋದಲ್ಲಿ ಟಿಕೆಟ್‌ ಮಾರಾಟವಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ