ಎಮಿ ಜಾಕ್ಸನ್ ಫೋನ್ ಹ್ಯಾಕ್, ಖಾಸಗಿ ಚಿತ್ರಗಳು ಲೀಕ್

ಬುಧವಾರ, 15 ಫೆಬ್ರವರಿ 2017 (09:46 IST)
ನಟಿ ಎಮಿ ಜಾಕ್ಸನ್ ಫೋನ್ ಹ್ಯಾಕ್‌ ಆಗಿದೆ. ಮುಂಬೈನಿಂದ ಚೆನ್ನೈಗೆ ಹೊರಡುತ್ತಿದ್ದ ಅವರು ಮುಂಬೈನ ಒಂದು ಮೊಬೈಲ್ ಅಂಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹ್ಯಾಕ್ ಆಗಿದೆ. ಅವರ ಫೋನ್‌ನಲ್ಲಿದ್ದ ಖಾಸಗಿ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಲೀಕ್ ಮಾಡಿದ್ದಾರೆ ಹ್ಯಾಕರ್‌ಗಳು. 
 
ಈ ವಿಷಯದ ಬಗ್ಗೆ ಎಮಿ ಮಾಧ್ಯಮಗಳ ಜತೆಗೆ ಮಾತನಾಡುತ್ತಾ, ತನ್ನ ಫೋನ್ ಹ್ಯಾಕ್ ಆಗಿದೆ ಎಂದು ಗೊತ್ತಾಗುತ್ತಿದ್ದಂತೆ ಶಾಕ್ ಆದೆ ಎಂದು. ಇದು ಚಿಕ್ಕ ವಿಷಯ ಅಲ್ಲವೆಂದಿದ್ದಾರೆ. ಕೂಡಲೆ ಅವರು ಲಂಡನ್‌ನಲ್ಲಿನ ಸೈಬರ್ ಕ್ರೈಮ್ ಕೇಂದ್ರಕ್ಕೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ. 
 
ಎಮಿ ಜಾಕ್ಸನ್ ಸದ್ಯಕ್ಕೆ ಸೂಪರ್ ಸ್ಟಾರ್ ರಜನಿಕಾಂಗ್ ಮುಖ್ಯಭೂಮಿಕೆಯಲ್ಲಿರುವ 2.0 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದು. ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಅವರು ಚೆನ್ನೈಗೆ ಹೊರಡುತ್ತಿದ್ದರು. ಅಷ್ಟರಲ್ಲಿ ಈ ಎಡವಟ್ಟಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ