Operation Sindoora: ಪವಿತ್ರ ಸಿಂಧೂರಕ್ಕೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಎಂದ ಕಿಚ್ಚ ಸುದೀಪ್

Sampriya

ಬುಧವಾರ, 7 ಮೇ 2025 (14:22 IST)
Photo Courtesy X
ಬೆಂಗಳೂರು: ಒಬ್ಬ ಭಾರತೀಯನಾಗಿ ಈ ಪವಿತ್ರ ಮಣ್ಣಿನ ಮಗನಾಗಿ, ಪೆಹಲ್ಗಾಮ್‌ನಲ್ಲಿ ನಡೆದ ಘಟನೆಯಿಂದ ನೋವು ಅನುಭವಿಸಿದೆ. ಇಂದು ನ್ಯಾಯ ಸಿಕ್ಕಿದೆ ಎಂದು ನಟ ಕಿಚ್ಚ ಸುದೀಪ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಪೆಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಭಾರತ ಪ್ರತಿಕಾರ ತೀರಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ 9 ಅಡುಗುತಾಣಗಳ ಮೇಲೆ ಭಾರತೀಯ ಸೇನೆ ಕಳೆದ ರಾತ್ರಿ ಏರ್‌ಸ್ಟ್ರೈಕ್ ಮಾಡಿದೆ. ಈ ಹಿನ್ನೆಲೆ ಕಿಚ್ಚ ಸುದೀಪ್  ಭಾರತೀಯ ಸೇನೆ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕೇವಲ ಒಂದು ಧ್ಯೇಯವಲ್ಲ. ಇದು ಪವಿತ್ರ ಪ್ರತಿಜ್ಞೆ. ಉಗ್ರರು ದಾಳಿ ಮಾಡುವ ಮೂಲಕ ಭಾರತದ ಸಿಂಧೂರಕ್ಕೆ ಅಪಮಾನ ಮಾಡಲಾಗಿತ್ತು. ಆದರೆ ನಮ್ಮ ಧೈರ್ಯಶಾಲಿ ಸೈನಿಕರು ನಿಖರತೆಯಿಂದ ಅದರ ಗೌರವವನ್ನು ಪುನಃಸ್ಥಾಪಿಸಿದ್ದಾರೆ. ನಮ್ಮ ಸಶಸ್ತ್ರ ಪಡೆಗಳಿಗೆ ನನ್ನ ವಂದನೆಗಳು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ನಮ್ಮ ಗೌರವಾನ್ವಿತ ಪ್ರಧಾನಿಗಳು ರಕ್ಷಣಾ ನಾಯಕತ್ವಕ್ಕೆ, ಎತ್ತರವಾಗಿ, ದೃಢವಾಗಿ ಮತ್ತು ನಿರ್ಭೀತವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಕಾರ್ಯಕ್ಕಾಗಿ ವಂದನೆಗಳು. ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ. ಜೈ ಹಿಂದ್ ಎಂದು ಅವರು ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ