ಆನಂದ್ ಎಲ್ ರೈ ಸಿನಿಮಾದಲ್ಲಿ ಶಾರುಖ್ ಗೆ ನಾಯಕಿಯಾಗ್ತಾರಾ ಕತ್ರೀನಾ?

ಶನಿವಾರ, 23 ಜುಲೈ 2016 (08:53 IST)
ಬಾಲಿವುಡ್ ನಿರ್ದೇಶಕ ಆನಂದ್ ಎಲ್ ರೈ ಅವರು ನಿರ್ದೇಶನ ಮಾಡುತ್ತಿರುವ ಮುಂದಿನ ಸಿನಿಮಾದಲ್ಲಿ  ಶಾರುಖ್ ಖಾನ್ ಅವರು ಅಭಿನಯಿಸುತ್ತಾರೆ ಅಂತಾ ಹೇಳಲಾಗಿತ್ತು.ಆದ್ರೆ ಸಿನಿಮಾದಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನೋ ಬಗ್ಗೆ ರೈ ಬಾಯ್ಬಿಟ್ಟಿರಲಿಲ್ಲ. ಇನ್ನು ಪ್ರಮುಖವಾಗಿ ಸಿನಿಮಾದ ನಾಯಕಿಯ ಬಗ್ಗೆ ಭಾರೀ ಚರ್ಚೆಗಳಾಗಿದ್ದವು.

ಇದೀಗ ಆ ಬಗ್ಗೆ ಆನಂದ್ ಮಾತನಾಡಿದ್ದಾರೆ.ಇತ್ತೀಚೆಗೆ ಆನಂದ್ ಎಲ್ ರೈ ಅವರಲ್ಲಿ ನಿಮ್ಮ  ಸಿನಿಮಾಗೆ ನಾಯಕಿಯಾಗಿ ಕತ್ರೀನಾ ಕೈಫ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ನಿಜಾನಾ ಅಂತಾ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿ ಆನಂದ್ ನಾನಿನ್ನು ಸಿನಿಮಾದ ನಾಯಕಿಯ ಬಗ್ಗೆ ಯೋಚನ ಮಾಡಿಲ್ಲ.

ಸದ್ಯ ಸಿನಿಮಾದ ಇತರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ.ಇದೊಂದು ಪ್ರೇಮಕಥೆ.ನನ್ನ ಪಾಲಿಗೆ ಇದು ಅತ್ಯಂತ ಮಹತ್ವವಾದ ಸಿನಿಮಾ.ಒಬ್ಬ ನಿರ್ದೇಶಕನಾಗಿ ನನಗೆ ಈ ಸಿನಿಮಾ ಹೀಗೆ ಮೂಡಿ ಬರಬೇಕು ಅನ್ನೋ ಪ್ಲಾನ್ ಗಳಿರುತ್ತವೆ.ಅದರಂತೆ ನಡೆಯಬೇಕು ಅಂದ್ರೆ ಅದಕ್ಕೆ ಕೊಂಚ ಕಾಲಾವಕಾಶ ಬೇಕು, ಹಾಗಾಗಿ ಸಿನಿಮಾ ಬರೋದು ನಾಯಕಿ ಆಯ್ಕೆ ಇವೆಲ್ಲವೂ ಕೂಡ ತಡವಾಗುತ್ತೆ ಅಂತಾ ಅವರು ಹೇಳಿದ್ದಾರೆ.

ಇನ್ನು ನಾನು ಸಿನಿಮಾ ಮಾಡದೇ ಇರೋವಾಗ ನಾನು ಪ್ರೇಕ್ಷಕರಿಗೆ ಮೋಸ ಮಾಡುತ್ತಿದ್ದೇನೆ ಅಂತಾ ಅನ್ನಿಸುತ್ತೆ ಅಂತಾ ಅವರು ಹೇಳಿದ್ದಾರೆ. ಹೆಚ್ಚಿನ ಸಲ ನಾವು ಅಭಿಮಾನಿಗಳಿಗೆ ಸಿನಿಮಾದ ಕಥೆಯ ಹೆಸರಿನಲ್ಲಿ ಮೋಸ ಮಾಡುತ್ತೇವೆ,ನಾವು ಆ ರೀತಿ ಸಿನಿಮಾ ಮಾಡುತ್ತೇವೆ ಈ ರೀತಿ ಸಿನಿಮಾ ಮಾಡುತ್ತೇವೆ ಅಂತಾ ಹೇಳುತ್ತೇವೆ.ಆದ್ರೆ ಎಷ್ಟೋ ಸಾರಿ ಹೇಳಿದ ರೀತಿಯ ಸಿನಿಮಾವನ್ನು ಪ್ರೇಕ್ಷಕರಿಗೆ ಕೊಡೋದಕ್ಕೆ ನಾವು ಸೋಲುತ್ತೇವೆ ಅಂತಾ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ