ಬಾಲ ಕಾರ್ಮಿಕರ ಕುರಿತು ಜಾಗೃತಿ ಮೂಡಿಸಿದ ನಟ ಅನಿಲ್ ಕಪೂರ್

ಶುಕ್ರವಾರ, 10 ಜೂನ್ 2016 (19:11 IST)
ಬಾಲಿವುಡ್ ನಟ ಇವತ್ತು ಬಾಲ ಕಾರ್ಮಿಕರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಅರಿವು ಮೂಡಿಸಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಬಾಲ ಕಾರ್ಮಿಕರ ಬಗ್ಗೆ ಕ್ಯಾಪೇನ್ ಕೈಗೊಂಡ ನಟ ಅನಿಲ್ ಕಪೂರ್ ಎಲ್ಲಾ ಕಡೆಗಳಲ್ಲಿ ಭೇಟಿ ಅರಿವು ಮೂಡಿಸುವುದು ಕಂಡು ಬಂತು. 
ಇಂಡಿಯಾ ಚೈಲ್ಡ್ ರೈಟ್ಸ್ ಸಂಸ್ಧೆಯ ಅಂಬಾಸಿಡರ್ ಆಗಿರುವ ಅನಿಲ್ ಕಪೂರ್, ಎನ್‌ಜಿಓ ನೇತೃತ್ವದಲ್ಲಿ ಅನಿಲ್ ಕಪೂರ್ ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. 
 
ನಮ್ಮ ದೇಶದಲ್ಲಿ ಶಾಲೆಗೆ ಹೋಗದೆ ಕೆಲಸಕ್ಕೆ ಹೋಗುವ ಸುಮಾರು 8 ಮಿಲಿಯನ್ ಮಕ್ಕಳಿದ್ದಾರೆ. ಅಧಿಕ ಸಂಖ್ಯೆಯ ಮಕ್ಕಳಿಗೆ ತಮ್ಮ ಭವಿಷ್ಯದ ಬಗ್ಗೆ ಅರಿವು ಇರುವುದಿಲ್ಲ ಎಂದು ಮಾಧ್ಯಮಗಳಿಗೆ ಅನಿಲ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. 
 
2011ರ ವರದಿಯಂತೆ ಭಾರತದಲ್ಲಿ ಬಾಲ ಕಾರ್ಮಿಕರ ಸಂಖ್ಯೆ 8.2 ಮಿಲಿಯನ್ ಹೆಚ್ಚಿದೆ. 14 ವರ್ಷದ ಮಕ್ಕಳು ಬಾಲ ಕಾರ್ಮಿಕ ಪದ್ಧತಿಯಲ್ಲಿ ಸಿಲುಕಿದ್ದು, ಅದಲ್ಲದೇ 5ರಿಂದ 9ವರ್ಷದ ಮಕ್ಕಳು ಕೆಲಸ ಮಾಡುತ್ತಿದ್ದಾರೆ, ಭಾರತ ಸರ್ಕಾರ ಬಾಲ ಕಾರ್ಮಿಕರ ರಕ್ಷಣೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಅನಿಲ್ ಕಪೂರ್ ಇದೇ ವೇಳೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 
 

ವೆಬ್ದುನಿಯಾವನ್ನು ಓದಿ