ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ಸಿನಿಮಾ: ಡಾ.ಸಿಂಗ್ ಪಾತ್ರದಲ್ಲಿ ಅನುಪಮ್ ಕೇರ್

ಮಂಗಳವಾರ, 6 ಜೂನ್ 2017 (16:55 IST)
ಮುಂಬೈ:ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಜೀವನ ಕುರಿತು ಸಿನಿಮಾ ನಿರ್ಮಾಣವಾಗುತ್ತಿದೆ. ಬಾಲಿವುಡ್ ನಟ, ಪ್ರಧಾನಿ ಮೋದಿ ಅಭಿಮಾನಿ ಅನುಪಮ್ ಕೇರ್ ಮನಮೋಹನ್ ಸಿಂಗ್ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ.
 
ಸಿಂಗ್ ಅವರಿಗೆ ಸಲಹೆಗಾರರಾಗಿದ್ದ ಸಂಜಯ್ ಬಾರೂ ' ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎನ್ನೋ ಪುಸ್ತಕ ಬರೆದಿದ್ದರು. ಈ ಪುಸ್ತಕ ಆಧರಿಸಿ ಈಗ ಚಿತ್ರ ನಿರ್ಮಾಣವಾಗುತ್ತಿದೆ. ಹನ್ಸಲ್ ಮೆಹತಾ ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ವಿಜಯ್ ರತ್ನಾಕರ್ ಗುತ್ತೆ ನಿರ್ದೇಶಿಸುತ್ತಿದ್ದಾರೆ. 
  
ಜೂನ್.7ರಂದು ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಲಿದ್ದು,2019ರ ಚುನಾವಣೆ ವೇಳೆ ರಿಲೀಸ್ ಆಗಲಿದೆಯಂತೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 
 

ವೆಬ್ದುನಿಯಾವನ್ನು ಓದಿ