ಬಿಗ್ ಬಾಸ್ ಪ್ರಥಮ್ ಟ್ರೋಲ್: ಉಪವಾಸವಿದ್ರೂ ಇಷ್ಟು ಎನರ್ಜಿ ಇರುತ್ತಾ

Krishnaveni K

ಬುಧವಾರ, 30 ಜುಲೈ 2025 (17:53 IST)

ಬೆಂಗಳೂರು: ಬೆಳಿಗ್ಗೆಯಿಂದ ಸಂಜೆಯವರೆಗೂ ಉಪವಾಸವಿದ್ರೂ ಇಷ್ಟು ಎನರ್ಜಿಟಿಕ್ ಆಗಿರುತ್ತಾರಾ ಎಂದು ಬಿಗ್ ಬಾಸ್ ಪ್ರಥಮ್ ಫುಲ್ ಟ್ರೋಲ್ ಆಗಿದ್ದಾರೆ. ನಟ ದರ್ಶನ್ ಫ್ಯಾನ್ಸ್ ವಿರುದ್ಧ ಸಮರ ಸಾರಿರುವ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ನಿನ್ನೆಯಿಂದ ಪ್ರಥಮ್ ತಮ್ಮ ಮೇಲೆ ಡಿಬಾಸ್ ಫ್ಯಾನ್ಸ್ ನಡೆಸಿದ ದಾಳಿ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಥಮ್, ನಟ ದರ್ಶನ್ ಬರುವವರೆಗೂ ಉಪವಾಸ ಮಾಡುವುದಾಗಿ ಶಪಥ ಮಾಡಿದ್ದರು.

ಅದರಂತೆ ನಿನ್ನೆ ರಾತ್ರಿವರೆಗೆ ಧರಣಿ ಕೂತಿದ್ದ ಅವರು ಬಳಿಕ ಮನೆಗೆ ತೆರಳಿದ್ದರು. ಇಂದು ಮತ್ತೆ ಫುಲ್ ಎನರ್ಜಿಯಲ್ಲಿ ಧರಣಿ ಮಾಡುತ್ತಿದ್ದಾರೆ. ಪೊಲೀಸರ ಜೊತೆಗೂ ವಾಗ್ವಾದ ನಡೆಸಿದ್ದಾರೆ. ಅವರ ಎನರ್ಜಿ ನೋಡಿ ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

ಕಾರಿನಲ್ಲಿ ಹೋಗ್ತಾ ತಿಂಡಿ ತಿಂದು ಮನೆಗೆ ಹೋದ ಮೇಲೆ ಊಟ ಮಾಡಿ, ಬೆಳಿಗ್ಗೆ ತಿಂಡಿ ಮುಗಿಸಿ ಬಂದು ಈಗ ಉಪವಾಸದ ನಾಟಕವಾಡ್ತಿದ್ದಾನೆ ಎಂದು ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಒಂದು ವೇಳೆ ನಿಜವಾಗಿಯೂ ಉಪವಾಸ ಮಾಡಿದ್ರೆ ಇಷ್ಟು ಹೊತ್ತು ಎನರ್ಜಿಯಿಂದ ಇರಲು ಸಾಧ್ಯವಾ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ