ಪತಿ ಕೊಹ್ಲಿ ಅವರ ಜೊತೆ ಶೋವೊಂದಕ್ಕೆ ಬರಲು ಅನುಷ್ಕಾ ನಿರಾಕರಿಸಿದ್ಯಾಕೆ...?
ಸೋಮವಾರ, 12 ಫೆಬ್ರವರಿ 2018 (06:19 IST)
ಮುಂಬೈ : ಅನುಷ್ಕಾ ಅವರು ತಮ್ಮ ಪತಿ ಕೊಹ್ಲಿ ಅವರ ಜೊತೆ ಕಾಫಿ ವಿತ್ ಕರಣ್ ಶೋಗೆ ಬರಲು ನಿರಾಕರಿಸಿದ್ದಾರಂತೆ.
ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಯನ್ನು ಆಹ್ವಾನಿಸಿದ್ದರಂತೆ. ಆದರೆ ಕೊಹ್ಲಿ ಅವರ ಜೊತೆ ಶೋಗೆ ಬರಲು ಅನುಷ್ಕಾ ಶರ್ಮಾ ಅವರು ನಿರಾಕರಿಸಿದ್ದು, ಬದಲಾಗಿ ಪರಿ ಚಿತ್ರದ ಪ್ರಚಾರ ಮಾಡುವುದಕ್ಕಾಗಿ ಚಿತ್ರದ ಸಹ ನಿರ್ಮಾಪಕಿ ಜೊತೆ ಶೋಗೆ ಬರುವುದಾಗಿ ಹೇಳಿದ್ದಾಳಂತೆ. ಆದ್ರೆ ಶೋ ನಿರ್ವಾಹಕರ ಒತ್ತಾಯದ ಮೇರೆಗೆ ಅನುಷ್ಕಾ ಅವರು ತಮ್ಮ ಪತಿ ಕೊಹ್ಲಿ ಅವರ ಜೊತೆ ಶೋಗೆ ಬರಲು ಒಪ್ಪಿಕೊಂಡಿದ್ದಾರಂತೆ. ಒಟ್ಟಿನಲ್ಲಿ ಮದುವೆ ನಂತರ ಈ ಶೋನಲ್ಲಿ ಇಬ್ಬರನ್ನು ಒಟ್ಟಿಗೆ ನೋಡುವ ಭಾಗ್ಯ ಅಭಿಮಾನಿಗಳದಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ