ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರ ಬಂದ ಅನುಷ್ಕಾ ಶರ್ಮಾ
ಇಷ್ಟು ದಿನ ಕ್ಲೀನ್ ಸ್ಲೇಟ್ ನಿರ್ಮಾಣ ಸಂಸ್ಥೆಯ ಮೂಲಕ ಒಳ್ಳೆಯ ಪ್ರಾಜೆಕ್ಟ್ ಹೊರತಂದಿರುವುದಕ್ಕೆ ಖುಷಿಯಿದೆ. ಇನ್ನು, ನಾನು ಈ ಸಂಸ್ಥೆಯ ಭಾಗವಾಗಿರುವುದಿಲ್ಲ ಎಂದು ಅನುಷ್ಕಾ ಹೇಳಿದ್ದಾರೆ.
ಮಗು, ಸಿನಿಮಾ ಕೆಲಸಗಳನ್ನು ಸಮತೋಲನ ಮಾಡುವುದು ಸುಲಭವಲ್ಲ. ಹೀಗಾಗಿ ನಿರ್ಮಾಣ ಜವಾಬ್ಧಾರಿಯಿಂದ ಹೊರಬರಲು ನಿರ್ಧರಿಸುವುದಾಗಿ ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಸಹೋದರ ಕರ್ಣೇಶ್ ಶರ್ಮಾ ಕ್ಲೀನ್ ಸ್ಲೇಟ್ ನಿರ್ಮಾಣ ಸಂಸ್ಥೆಯ ಜವಾಬ್ಧಾರಿ ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.