ಬೆಂಗಳೂರಿನಲ್ಲೆಡೆ ಹಾರಾಡಿದ ಪುನೀತ್ ಬ್ಯಾನರ್ ನ ವಿಮಾನ

ಗುರುವಾರ, 17 ಮಾರ್ಚ್ 2022 (18:00 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನದ ಅಂಗವಾಗಿ ಅವರ ಬ್ಯಾನರ್ ಹೊತ್ತ ಪುಟ್ಟ ವಿಮಾನವೊಂದು ಬೆಂಗಳೂರಿನ ಹಲವೆಡೆ ಇಂದು ಸಂಚಾರ ನಡೆಸಿದೆ.

ಹ್ಯಾಪೀ ಬರ್ತ್ ಡೇ ಪವರ್ ಸ್ಟಾರ್ ಎಂಬ ಬ್ಯಾನರ್ ಹೊತ್ತ ಪುಟ್ಟ ವಿಮಾನ ಬೆಳಿಗ್ಗೆ 9.30 ಕ್ಕೆ ಹೊರಟು ಪುನೀತ್ ಸಮಾಧಿ ಸುತ್ತ ಕೆಲವು ಹೊತ್ತು ಹಾರಾಟ ನಡೆಸಿದೆ.

ಬಳಿಕ ಈಗ ಸಂಜೆ ವೇಳೆಗೆ ಶಿವರಾಜ್ ಕುಮಾರ್ ನಿವಾಸವಿರುವ ಮಾನ್ಯತಾ ಟೆಕ್ ಪಾರ್ಕ್ ಬಳಿ, ಕೆ.ಆರ್ ಪುರಂ, ಬಾಣಸವಾಡಿ ಪ್ರದೇಶಗಳಲ್ಲಿ ಹಾರಾಟ ನಡೆಸಿದೆ. ಈ ಪುಟ್ಟ ವಿಮಾನದ ಜೊತೆಗೆ ಪವರ್ ಸ್ಟಾರ್ ಫೋಟೋವಿರುವ ಬ್ಯಾನರ್ ಆಕಾಶದಲ್ಲಿ ಹಾರಾಡುವುದು ಕಂಡು ಅಭಿಮಾನಿಗಳು ಪುಳಕಗೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ