ನಟಿ ಅನುಷ್ಕಾ ಶರ್ಮಾ ಬಗ್ಗೆ ಹೀಗೆಲ್ಲಾ ಬರೆದು ಮಣ್ಣು ತಿನ್ನುವ ಕೆಲಸ ಮಾಡಿತ್ತಾ ಈ ದಿನಪತ್ರಿಕೆ!
ಭಾನುವಾರ, 11 ಮಾರ್ಚ್ 2018 (06:14 IST)
ಮುಂಬೈ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು, ತಮ್ಮ ಬಗ್ಗೆ ನಕಲಿ ಸಂದರ್ಶನವನ್ನು ಪ್ರಕಟಿಸಿದ ಕಾರಣದಿಂದಾಗಿ ಬಂಗಾಳಿ ದಿನ ಪತ್ರಿಕೆಯೊಂದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇ ಸಮಯ್ ದಿನಪತ್ರಿಕೆಯೊಂದು ಅನುಷ್ಕಾ ಅವರ ಫೋಟೋ ಗಳ ಜೊತೆಗೆ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿರುವುದರ ಬಗ್ಗೆ ನಕಲಿ ಸಂದರ್ಶನವೊಂದನ್ನು ಪ್ರಕಟಿಸಿದ್ದು ಇದೀಗ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಅವರು ತಮ್ಮ ಟ್ವೀಟರ್ ನಲ್ಲಿ ಇ ಸಮಯ್ ನಂತಹ ಪ್ರಖ್ಯಾತ ದಿನಪತ್ರಿಕೆಯಲ್ಲಿ ಕೃತ್ರಿಮ ಸಂದರ್ಶನವನ್ನು ಪ್ರಕಟಿಸಿರುವುದನ್ನು ನೋಡಿದರೆ ಆಘಾತವಾಗುತ್ತದೆ. ತಾನು ಅವರೊಂದಿಗೆ ತನ್ನ ವೈಯಕ್ತಿಕ ಜೀವನದ ಕುರಿತು ಸಂದರ್ಶನವನ್ನೇ ನೀಡಿಲ್ಲ. ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಪತ್ರಿಕೆ ದುರುಪಯೋಗಪಡಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ