ಬೆಂಗಳೂರು: ಹಾಸ್ಯ ನಟ ಚಿಕ್ಕಣ್ಣ ಮದುವೆಗೆ ಸಜ್ಜಾಗಿದ್ದಾರೆ. ಸದ್ದಿಲ್ಲದೇ ಹಸೆಮಣೆ ಏರಲು ಉಪಾಧ್ಯಕ್ಷ ಚಿಕ್ಕಣ್ಣ ರೆಡಿಯಾಗಿದ್ದಾರೆ. ಅಷ್ಟಕ್ಕೂ ಚಿಕ್ಕಣ್ಣ ಮನಸ್ಸು ಕದ್ದ ಹುಡುಗಿ ಯಾರು? ಇಲ್ಲಿದೆ ವಿವರ.
ಮಹದೇವಪುರದ ಪಾವನಾ ಎಂಬ ಯುವತಿ ಜೊತೆ ಚಿಕ್ಕಣ್ಣ ಮದುವೆ ಫಿಕ್ಸ್ ಆಗಿದೆ. ಸದ್ಯಕ್ಕೆ ಈ ವಿಚಾರ ಗುಟ್ಟಾಗಿಯೇ ಇದೆ. ಮಂಡ್ಯ ಮೂಲದವರಾದ ಚಿಕ್ಕಣ್ಣ ತಮ್ಮ ಊರಿನ ಹುಡುಗಿಯನ್ನೇ ಮದುವೆಯಾಗುತ್ತಿದ್ದಾರೆ.
ಪಾವನಾ ಜೊತೆ ಸದ್ಯಕ್ಕೆ ಹೂ ಮುಡಿಸುವ ಶಾಸ್ತ್ರ ನೆರವೇರಿದೆ. ಸದ್ಯದಲ್ಲೇ ಚಿಕ್ಕಣ್ಣ ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕಗಳು ನಿಗದಿಯಾಗಲಿವೆ ಎನ್ನಲಾಗಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ಹೂ ಮುಡಿಸುವ ಶಾಸ್ತ್ರ ನೆರವೇರಿದೆ.
ಇದು ಲವ್ ಮ್ಯಾರೇಜಾ, ಮನೆಯವರೇ ನೋಡಿ ನಿಶ್ಚಯಿಸಿದ ಮದುವೆಯಾ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಸದ್ಯಕ್ಕೆ ಈ ವಿಚಾರವನ್ನು ಕುಟುಂಬಸ್ಥರು ಗುಟ್ಟಾಗಿಯೇ ಇರಿಸಿದ್ದರು. ಇಬ್ಬರೂ ಜೊತೆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.