ಐಶ್ವರ್ಯಾ ರೈಗೆ ಹಳೆಯ ಘಟನೆ ನೆನಪಿಸಿದ ಅನುಷ್ಕಾ

ಸೋಮವಾರ, 24 ಅಕ್ಟೋಬರ್ 2016 (13:43 IST)
ಮುಂಬೈ:  ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಜತೆಯಾಗಿ ನಟಿಸಿದ ಐಶ್ವರ್ಯಾ ರೈ ಮತ್ತು ಅನುಷ್ಕಾ ಪರಸ್ಪರ ಮೆಚ್ಚಿಕೊಂಡಿದ್ದಾರೆ. ಮಾಮಿ ಚಿತ್ರೋತ್ಸವದಲ್ಲಿ ನಡೆದ ಸಂವಾದದಲ್ಲಿ ಅನುಷ್ಕಾ ಐಶ್ವರ್ಯಾ ಒಳ್ಳೆತನದ ಬಗ್ಗೆ ಹೊಗಳಿದ್ದಾರೆ.

ಕೆಲವು ವರ್ಷಗಳ ಹಿಂದೆ ಅನುಷ್ಕಾ ಆಗಿನ್ನೂ ಬಾಲಿವುಡ್ ಗೆ ಬಂದು ಹೆಚ್ಚು ಸಮಯವಾಗಿರಲಿಲ್ಲ. ಅದೇ ಸಮಯಕ್ಕೆ ಬಿಗ್ ಬಿ ಅಮಿತಾಭ್ ಬಚ್ಚನ್ ಪಾರ್ಟಿ ಆಯೋಜಿಸಿದ್ದರು. ಅದಕ್ಕೆ ಖುದ್ದಾಗಿ ಅನುಷ್ಕಾರನ್ನೂ ಆಹ್ವಾನಿಸಿದ್ದರು.

ಬಿಗ್ ಬಿ ಕರೆದ ಮೇಲೆ ಹೋಗದೇ ಇರಲಾದೀತೇ. ಹೀಗಾಗಿ ಅನುಷ್ಕಾ ಕೂಡಾ ತಮ್ಮ ತಾಯಿಯ ಜತೆ ಪಾರ್ಟಿಗೆ ಹೋಗಿದ್ದರಂತೆ. ಆದರೆ ಅವರಿಗೆ ಅಚ್ಚರಿಯಾಗಿದ್ದು, ಬಚ್ಚನ್ ಪರಿವಾರ ಅತಿಥಿಗಳನ್ನು ಸ್ವಾಗತಿಸಿದ ಪರಿ. ಅದರಲ್ಲೂ ವಿಶೇಷವಾಗಿ ಮೂಲೆಯಲ್ಲಿ ನಿಂತಿದ್ದಅನುಷ್ಕಾರನ್ನು ಸ್ವತಃ ಐಶ್ವರ್ಯಾ ಹತ್ತಿರ ಬಂದು ವಿಚಾರಿಸಿಕೊಂಡರು ಎಂದು ಅನುಷ್ಕಾ ಐಶ್ ಗುಣಗಾನ ಮಾಡಿದ್ದಾರೆ.

ಅದೇ ರೀತಿ ಐಶ್ ಕೂಡಾ ಸುಮ್ಮನೇ ಕೂರಲಿಲ್ಲ. ಆಕೆ ಸಂಕೋಚದಿಂದ ಮೂಲೆಯಲ್ಲಿ ನಿಂತಿದ್ದರು. ಹಾಗಾಗಿ ನಾನೇ ಖುದ್ದಾಗಿ ಹೋಗಿ ವಿಚಾರಿಸಿ ಆಕೆಯಲ್ಲಿದ್ದ ಸಂಕೋಚ ದೂರ ಮಾಡಬೇಕಿತ್ತು ಎಂದಿದ್ದಾರೆ. ನೋಡೀಪ್ಪಾ.. ಇಬ್ಬರ ನಡುವೆ ಎತ್ತಿಕಟ್ಟಲು ಕಾಯುತ್ತಿದ್ದವರು ಇನ್ನು ಏನೂ ಹೇಳುವ ಹಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ