ವಿರಾಟ್ ಬಳಿ ಬ್ಯಾಟಿಂಗ್ ಟಿಪ್ಸ್ ಪಡೆಯುತ್ತಿದ್ದಾರಂತೆ ಅನುಷ್ಕಾ ಶರ್ಮಾ
ಮಹಿಳಾ ಕ್ರಿಕೆಟ್ ಆಟಗಾರ್ತಿ, ವೇಗಿ ಜೂಲಾನ್ ಗೋಸ್ವಾಮಿ ಅವರ ಜೀವನಾಧಾರಿತ ಛಕ್ದಾ ಎಕ್ಸ್ ಪ್ರೆಸ್ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅನುಷ್ಕಾ ಜೂಲಾನ್ ಗೋಸ್ವಾಮಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೀಗಾಗಿ ಅನುಷ್ಕಾ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡಾ ಅಭ್ಯಾಸ ಮಾಡುತ್ತಿದ್ದಾರೆ. ಇದಕ್ಕಾಗಿ ಒಬ್ಬ ಕೋಚ್ ಕೂಡಾ ಇದ್ದಾರಂತೆ. ಇದರ ಜೊತೆಗೆ ಆಗಾಗ ವಿರಾಟ್ ಗೆ ಬ್ಯಾಟಿಂಗ್ ವಿಡಿಯೋ ಕಳುಹಿಸಿ ಸಲಹೆ ಕೇಳುತ್ತಿರುತ್ತೇನೆ ಎಂದಿದ್ದಾರೆ ಅನುಷ್ಕಾ.