ಐಪಿಎಲ್ 2022: ಕಪ್ಪು ಪಟ್ಟಿ ಧರಿಸಿ ಆಡಿದ ಗುಜರಾತ್-ಚೆನ್ನೈ ಕ್ರಿಕೆಟಿಗರು
ಇಂದು ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲೂ ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗನಿಗೆ ಕ್ರಿಕೆಟಿಗರು ಗೌರವ ಸೂಚಿಸಿದ್ದಾರೆ. ಇಂದು ಗುಜರಾತ್ ಮತ್ತು ಚೆನ್ನೈ ನಡುವೆ ಇದೀಗ ಪಂದ್ಯ ನಡೆಯುತ್ತಿದ್ದು, ಆಂಡ್ರ್ಯೂ ಸೈಮಂಡ್ಸ್ ಗೌರವಾರ್ಥ ಕ್ರಿಕೆಟಿಗರು ಕಪ್ಪು ಪಟ್ಟಿ ಧರಿಸಿ ಆಡುತ್ತಿದ್ದಾರೆ. ಬಳಿಕ ನಡೆಯಲಿರುವ ಲಕ್ನೋ ಮತ್ತು ರಾಜಸ್ಥಾನ್ ನಡುವಿನ ಪಂದ್ಯದಲ್ಲೂ ಕ್ರಿಕೆಟಿಗರು ಕಪ್ಪು ಪಟ್ಟಿ ಧರಿಸಿ ಆಡುವ ಸಾಧ್ಯತೆಯಿದೆ.