ಹೋಲಿಸ್ಟಿಕ್ ಪೌಷ್ಟಿಕಾಂಶವಾದಿ ಲುಕ್ ಕೌಂಟಿನೋ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅನುಷ್ಕಾ ಅವರ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ವಿಶೇಷವಾದ ಕಾರಣಕ್ಕಾಗಿ ಅನುಷ್ಕಾ ಅವರೊಂದಿಗೆ ಸಹಭಾಗಿಯಾಗುವುದಾಗಿ ಬಹಿರಂಗಪಡಿಸಿದ್ದಾರೆ. "ನಾವು ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದ್ದೇವೆ. ದೇಶದ ಆರೋಗ್ಯವನ್ನು ಬದಲಾಯಿಸುವುದು, ತಡೆಗಟ್ಟುವಲ್ಲಿ ಬಂಡವಾಳವನ್ನು ಪ್ರೋತ್ಸಾಹಿಸುವುದು ಮತ್ತು ಜೀವನಶೈಲಿಯನ್ನು ಹೊಸ ಧರ್ಮವಾಗಿ ಮತ್ತು ದಿವ್ಯಔಷಧವಾಗಿ ಬಳಸುವುದು ನಮ್ಮ ಗುರಿಯಾಗಿದೆ. ನಾವು 'ಆರೈಕೆ' ಎಂಬ ಪದವನ್ನು 'ಆರೋಗ್ಯ ರಕ್ಷಣೆ' ಎಂದು ಕರೆಯಲು ಪ್ರಯತ್ನಿಸುತ್ತೇವೆ" ಎಂದು ಲುಕ್ ಕೌಂಟಿನೋ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅನುಷ್ಕಾ ಅವರೊಂದಿಗೆ ತಾವಿರುವ ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.
ಸೈಜ್ ಜೀರೋ ಚಿತ್ರದಲ್ಲಿ ಬೊಜ್ಜಿನಿಂದ ಬಳಲುತ್ತಿರುವ ಹುಡುಗಿಯ ಪಾತ್ರದಲ್ಲಿ ಅಭಿನಯಿಸಲು ತಮ್ಮ ತೂಕವನ್ನು ಹೆಚ್ಚಿಸಿಕೊಂಡಾಗಿನಿಂದ ಅನುಷ್ಕಾ ಅವರು ತಮ್ಮ ತೂಕವನ್ನು ಇಳಿಸಿಕೊಳ್ಳಲು ಕಷ್ಟವನ್ನು ಎದುರಿಸುತ್ತಿದ್ದರು. ಅವರ ಅಭಿಮಾನಿಗಳಿಂದ ಈ ಕುರಿತಾಗಿ ಹಲವು ದೂರುಗಳೂ ಕೇಳಿಬಂದಿದ್ದವು. ಬಹಳ ಹಿಂದೆಯೇ ಅವರು ತೂಕವನ್ನು ಕಳೆದುಕೊಳ್ಳಲು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ ಎನ್ನುವ ವದಂತಿಗಳೂ ಸಹ ಕೇಳಿ ಬಂದಿದ್ದವು. ಅದೇನೇ ಇದ್ದರೂ ಈಗಿನ ಅನುಷ್ಕಾ ಅವರ ಈ ಫಿಟ್ ಲುಕ್ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿರುವುದಂತೂ ಸುಳ್ಳಲ್ಲ.