ಮದುವೆ ಸಂಭ್ರಮದಲ್ಲಿ ಪ್ರಭಾಸ್-ಅನುಷ್ಕಾ ಜೋಡಿ!

ಭಾನುವಾರ, 30 ಡಿಸೆಂಬರ್ 2018 (06:12 IST)
ಹೈದರಾಬಾದ್: ಬಾಹುಬಲಿ ಖ್ಯಾತಿಯ ಪ್ರಭಾಸ್-ಅನುಷ್ಕಾ ಜೋಡಿ ರಿಯಲ್ ಲೈಫ್ ನಲ್ಲೂ ಜೋಡಿಯಾಗುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇವರಿಬ್ಬರು ಮಾತ್ರ ಈ ವಿಚಾರದಲ್ಲಿ ಏನನ್ನೂ ಹೇಳುತ್ತಿಲ್ಲ.


ಆದರೆ ಇದೀಗ ಇಬ್ಬರೂ ಮದುವೆ ಮನೆಗೆ ಬಂದಿದ್ದಾರೆ. ಅವರ ಜತೆಗೆ ಬಾಹುಬಲಿ ವಿಲನ್ ರಾಣಾ ದಗ್ಗುಬಟಿ ಕೂಡಾ ಇದ್ದಾರೆ. ಇವರು ಮೂವರೂ ಬಂದಿರುವುದು ಬಾಹುಬಲಿ ನಿರ್ದೇಶಕ ರಾಜಮೌಳಿ ಪುತ್ರನ ಮದುವೆಗೆ!

ರಾಜಮೌಳಿ ಪುತ್ರ ಎಸ್ ಎಸ್ ಕಾರ್ತಿಕೇಯ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದು, ಇವರ ಮದುವೆಯ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳು ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಭಾಸ್, ಅನುಷ್ಕಾ, ರಾಣಾ ಸೇರಿದಂತೆ ರಾಜಮೌಳಿ ಆಪ್ತರ ದಂಡೇ ಹರಿದುಬಂದಿದೆ.

ಅಂದ ಹಾಗೆ ಕಾರ್ತಿಕೇಯ ವಿವಾಹವಾಗುತ್ತಿರುವುದು ತೆಲುಗು ನಟ ಜಗಪತಿ ಬಾಬು ಸೊಸೆ ಪೂಜಾ ಪ್ರಸಾದ್ ರನ್ನು. ಇಂದು ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ನಿನ್ನೆಯಿಂದಲೇ ಕಾರ್ಯಕ್ರಮಗಳು ಆರಂಭವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ