ಕೊಹ್ಲಿ ಜೊತೆ ಪೋಸ್ ಕೊಡುವಾಗ ಓಲಾಡುತ್ತಿದ್ದ ಅನುಷ್ಕಾ: ಡ್ರಿಂಕ್ಸ್ ತಗೊಂಡಿರ್ಬೇಕು ಎಂದ ನೆಟ್ಟಿಗರು

ಮಂಗಳವಾರ, 2 ಆಗಸ್ಟ್ 2022 (17:00 IST)
ಮುಂಬೈ: ವಿರಾಟ್ ಕೊಹ್ಲಿ ಜೊತೆ ಯುರೋಪ್ ಪ್ರವಾಸ ಮುಗಿಸಿ ಅನುಷ್ಕಾ ಶರ್ಮಾ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಈ ವೇಳೆ ಸಹಜವಾಗಿಯೇ ಫೋಟೋಗ್ರಾಫರ್ ಗಳು ಕೊಹ್ಲಿ ದಂಪತಿಯ ಫೋಟೋಗಾಗಿ ಹಿಂದೆ ಬಿದ್ದಿದ್ದಾರೆ. ಮೊದಲು ಮಗಳು ವಮಿಕಾಳನ್ನು ಕ್ಯಾಮರಾ ಕಣ್ಣಿಗೆ ಬೀಳದಂತೆ ಕಳುಹಿಸಿ ಕೊಟ್ಟ ಕೊಹ್ಲಿ ದಂಪತಿ ಬಳಿಕ ಫೋಟೋಗ್ರಾಫರ್ ಗಳಿಗೆ ಪೋಸ್ ಕೊಟ್ಟಿದ್ದಾರೆ.

ಆದರೆ ಪೋಸ್ ಕೊಡುವಾಗ ಅತಿಯಾಗಿ ನಗುತ್ತಾ, ಎಡವಿ ಬೀಳುತ್ತಿದ್ದ ಅನುಷ್ಕಾರ ವಿಡಿಯೋ ನೋಡಿ ನೆಟ್ಟಿಗರು ಬಹುಶಃ ಅನುಷ್ಕಾ ಮದ್ಯಪಾನ ಮಾಡಿರಬೇಕು ಎಂದು ಟ್ರೋಲ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ