ಹಾಲಿವುಡ್ ಸಿನಿಮಾಗಳಲ್ಲಿ ಅನುಷ್ಕ - ನಯನಾತಾರ ನಟನೆ ?

ಶುಕ್ರವಾರ, 15 ಆಗಸ್ಟ್ 2014 (11:39 IST)
ದಿ ಎಕ್ಸ್ ಪೆಂಡಬಲ್ಸ್ ಚಿತ್ರ ಸಿಲ್ವೆಸ್ಟರ್ ಸ್ಟಲ್ಲೋನ್ ನಟನೆಯ ಟಾಪ್ ಆಕ್ಷನ್ ಚಿತ್ರ. ಇದು ವಿಶ್ವದಲ್ಲಿ ಸಂಚಲನ ಮೂಡಿಸಿದ್ದ ಸಿನಿಮಾ ಆಗಿದೆ. ಈ ಚಿತ್ರದ ಮತ್ತೊಂದು ಸೀರೀಸ್ನ ಸಿದ್ಧತೆ ನಡೆಸಲಾಗುತ್ತಿದೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತ ಇಬ್ಬರು ಹೀರೋಯಿನ್ ಗಳನ್ನೂ ಆಯ್ಕೆ ಮಾಡುವತ್ತ ಗಮನ ನೀಡಲಾಗಿದೆ. ಇದು ಸಧ್ಯ ಕಾಲಿವುಡ್ ಮಾಧ್ಯಮಗಳು ಹರಡಿರುವ ಸುದ್ದಿ ಆಗಿದೆ. ಈ ಚಿತ್ರದಲ್ಲಿ ದಕ್ಷಿಣ ಭಾರತದ ಇಬ್ಬರು ನಟಿಯರನ್ನು ಆಯ್ಕೆ ಮಾಡಿಕೊಂಡು ಚಿತ್ರವನ್ನು ಮತ್ತಷ್ಟು  ಹೆಸರುವಾಸಿ ಮಾಡುವ ಹುನ್ನಾರದಲ್ಲಿ ಇದ್ದಾರೆ ಚಿತ್ರತಂಡ. 

ಇದಕ್ಕೆ ಸಂಬಂಧಪಟ್ಟಂತೆ ಲಕ್ಷ್ಮಿ ರೈ, ಅನುಷ್ಕ ಶೆಟ್ಟಿ,ನಯನತಾರ, ನೀತುಚಂದ್ರ ಪಟ್ಟಿಯಲ್ಲಿ ಇದ್ದಾರೆ. ಆದರೆ ಹೆಚ್ಚು ಅಂಕ ಸಿಕ್ಕಿರೋದು ಅನುಷ್ಕ ಶೆಟ್ಟಿ ಮತ್ತು ನಯನತಾರಗಂತೆ.. ಹಾಗಂತ ಕಾಲಿವುಡ್ ಮಾಧ್ಯಮಗಳು ಬರೆದಿವೆ. ಈ ಸಂಗತಿ ಅದೆಷ್ಟರ ಮಟ್ಟಿಗೆ ಸತ್ಯ ಎನ್ನುವುದು ಗೊತ್ತೇ ಇಲ್ಲ ಯಾರಿಗೂ ಆದರೂ ಸಹ ಇಂತಹದ್ದೊಂದು ಸುದ್ದಿ ಹರಡಿರುವುದು ಖಚಿತ ಆಗಿದೆ. ಹಾಗೇನಾದರೂ ಆದಲ್ಲಿ ದಕ್ಷಿಣ ಭಾರತದ ಸುಂದರಿಯರು ಹಾಲಿವುಡ್ ಆಕ್ಷನ್ ಚಿತ್ರಗಳಲ್ಲಿ ಕುಂಗ್ ಫೋ  ,ಆಡ್ತಾರೋ ಅಥ್ವಾ  ಡಿಶ್ಯುಂ ಡಿಶ್ಯುಂ  ಅಂತ ಫೈಟ್ ಮಾಡ್ತಾರೋ ನೋಡುವ ಸುದ್ದಿ ನಿಜವಾದ ಬಳಿಕ!

ವೆಬ್ದುನಿಯಾವನ್ನು ಓದಿ