ಬಾಲಿವುಡ್ ಕಡೆಗೆ ಹೊರಟ ಅನುಷ್ಕ ಶೆಟ್ಟಿ..

ಶುಕ್ರವಾರ, 26 ಸೆಪ್ಟಂಬರ್ 2014 (11:05 IST)
ದಕ್ಷಿಣ ಭಾರತದಲ್ಲಿ ತಮಗೆ ಒಂದು ಒಳ್ಳೆಯ ಸ್ಥಾನ ಪಡೆದ ಬಳಿಕ ಸಾಮಾನ್ಯವಾಗಿ ನಟಿಯರು ಬಾಲಿವುಡ್ ಕಡೆಗೆ ತಮ್ಮ ಚಿತ್ತ ನೆಡುತ್ತಾರೆ. ಟಾಪ್ ಹೀರೋಯಿನ್ ಗಳಾದ ತ್ರಿಶ, ಅಸಿನ್, ತಮನ್ನ, ಶ್ರುತಿ, ಕಾಜಲ್ ಈ ಪಟ್ಟಿಯಲ್ಲಿ ಇದ್ದಾರೆ. ಆದ್ರೆ ಈಗ ಈ ಪಟ್ಟಿಗೆ ಅನುಷ್ಕ ಶೆಟ್ಟಿ ಸಹಿತ ಸೇರ್ಪಡೆ ಆಗಿದ್ದಾಳೆ. ಆಕೆ ನಟಿಸಲು ಸಿದ್ಧ ಆಗಿರುವ ಸಿನಿಮಾದ ಹೆಸರು ಜುವೆನೈಲ್ ಎಂದು ನಿವಾಸ ಹೇಳುತ್ತಿದ್ದಾರೆ.ಈ ಚಿತ್ರದ ನಿರ್ದೇಶನವನ್ನು ಮಾಡುತ್ತಿರುವವರು ನಿವಾಸ್.

ತೆಲುಗು ನಿರ್ದೇಶಕ ಹಿಂದಿಯಲ್ಲೂ ಸಹಿತ ತಮ್ಮ ಛಾಪು ತೋರಿಸಿದ್ದಾರೆ. ಅಮಾಸ್ ಕಿ ಆಶಾ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದರು. ನಿವಾಸ್ ಕಥೆಯು ಇಷ್ಟ ಆದ ಕಾರಣ ಅನುಷ್ಕ ಸಹಿತ ಚಿತ್ರದಲ್ಲಿ ನಟಿಸಲು ಆದ್ಯತೆ ನೀಡಿರುವುದಾಗಿ ಹೇಳಿದ್ದಾಳೆ. ಪ್ರಸ್ತುತ  ತನ್ನ ಕೈಲಿ ಇರುವ ರುದ್ರಮದೇವಿ, ಬಾಹುಬಲಿ, ಲಿಂಗ ಮತ್ತು ಅಜಿತ್ ಜೊತೆ ನಟಿಸುತ್ತಾ ಇರುವ ಚಿತ್ರದ ಕೆಲಸಗಳು ಪೂರ್ಣವಾದ ನಂತರ ಈ ಯೋಜನೆಯತ್ತ ಗಮನ ನೀಡುವುದಾಗಿ ಹೇಳಿದ್ದಾಳೆ ಈ ಭಾಮೆ. 
 
ಒಟ್ಟಾರೆ ಈ ಚೆಲುವೆ ಬಾಲಿವುಡ್ ಗೆ ಎಂಟ್ರಿ ಆಗಲು ಸಕಲ ಸಿದ್ಧತೆಗಳನ್ನು ಸಹಿತ ಮಾಡಿಕೊಂಡಿದ್ದಾಳೆ ಎಂದು ಸುದ್ದಿಗಳು  ಹರಡಿವೆ. ಹಲವು ಕಥೆಗಳ ಸಂಗಮ ಆಗಿರುವ ಚಿತ್ರ ಇದಾಗಿದೆ ಎಂದು ಹೇಳಿದ್ದಾರೆ ನಿರ್ದೇಶಕ. ಹಲವಾರು ಕುತೂಹಲಕರ ಸಂಗತಿಗಳನ್ನು ಒಳಗೊಂಡಿರುವ ಈ ಚಿತ್ರ ಎಷ್ಟರ ಮಟ್ಟಿಗೆ ಅನುಷ್ಕಳಿಗೆ ಬ್ರೇಕ್ ನೀಡುತ್ತದೆ ಎನ್ನುವುದು ಸಧ್ಯದ ಪ್ರಶ್ನೆ.

ವೆಬ್ದುನಿಯಾವನ್ನು ಓದಿ