ಸೋನಾಕ್ಷಿ ಸಿನ್ಹಾ ಆ್ಯಕ್ಷನ್ ಗರ್ಲ್ ಇದ್ದಂತೆ : ಎಆರ್ ಮುರ್ಘದಾಸ್ ಹೇಳಿಕೆ

ಶುಕ್ರವಾರ, 1 ಜುಲೈ 2016 (18:24 IST)
'ಅಕಿರಾ' ಚಿತ್ರದಲ್ಲಿ ಉತ್ತಮ ಪ್ರದರ್ಶನ ತೋರಿರುವ ನಟಿ ಸೋನಾಕ್ಷಿ ಸಿನ್ಹಾ ಸೋನಾಕ್ಷಿ ಒಬ್ಬ ಆ್ಯಕ್ಷನ್ ಗರ್ಲ್ ಎಂದು ನಿರ್ದೇಶಕ ಎಆರ್ ಮುರ್ಘದಾಸ್ ತಿಳಿಸಿದ್ದಾರೆ.  120 ದಿನಗಳ ಕಾಲ ಅಕಿರಾ ಚಿತ್ರಕ್ಕಾಗಿ ಸೋನಾಕ್ಷಿ ಫೈಟ್ ಮಾಡಿದ್ದಾಳೆ. ಅದಕ್ಕಾಗಿ ಸೋನಾಕ್ಷಿ ಅವರ ಆ್ಯಕ್ಷನ್ ಸ್ಕಿಲ್ ನೋಡಿ ಪ್ರಭಾವಿತನಾಗಿದ್ದೇನೆ ಎಂದು ನಿರ್ದೇಶಕ ಎಆರ್ ಮುರ್ಘದಾಸ್ ತಿಳಿಸಿದ್ದಾರೆ. 


'ನನ್ನ ನಿರೀಕ್ಷೆಗಳಿಗೆ ಸೋನಾಕ್ಷಿ ಸರ್‌ಪ್ರೈಜ್ ನೀಡಿದ್ದಾಳೆ'. ಆದ್ದರಿಂದ ಬಾಲಿವುಡ್‌ನಲ್ಲಿ ಸೋನಾಕ್ಷಿ ಆ್ಯಕ್ಷನ್ ಗರ್ಲ್ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.  ಅಕಿರಾ ಚಿತ್ರ 2011ರಲ್ಲಿ ತಮಿಳು ಚಿತ್ರದ ರಿಮೇಕ್ ಇದಾಗಿದೆ.
 
ಸೆಪ್ಟಂಬರ್ 23 ರಂದು ಅಕಿರ ಸಿನಿಮಾ ರಿಲೀಸ್ ಆಗಲಿದೆ ಅಂತಾ ಸಿನಿಮಾ ತಂಡ ಹೇಳಿದೆ.ಅಂದ್ಹಾಗೆ ಅಕಿರ ಸಿನಿಮಾ ಸೋನಾಕ್ಷಿ ಪಾಲಿಗೆ ಅತ್ಯಂತ ಮಹತ್ವದ ಸಿನಿಮಾ.ಇದುವೆರಗೂ ತಾನು ನಿರ್ವಹಿಸದೇ ಇರುವಂತಹ ಪಾತ್ರವನ್ನು ಸೋನಾಕ್ಷಿ ಸಿನ್ಹಾ ಈ ಸಿನಿಮಾದಲ್ಲಿ ಮಾಡಿದ್ದಾರೆ.
 
ಇನ್ನು ಸಿನಿಮಾದಲ್ಲಿ ಅಭಿನಯಿಸಿದ್ದು ಕೂಡ ನಾನು ಅಚಾನಕ್ಕಾಗಿ ಅಂತಾ ಅವರು ಹೇಳಿದ್ದಾರೆ. ಹಾಗಾಗಿ ವಿಭಿನ್ನವಾದ ಪಾತ್ರದಲ್ಲಿ ಸೋನಾಕ್ಷಿ ಅವರನ್ನು ನೋಡದಕ್ಕಾಗಿ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.
 
ಅಕಿರಾ ಸಿನಿಮಾವನ್ನು ಎ.ಆರ್ ಮುರುಗದಾಸ್ ಅವರು ನಿರ್ದೇಶನ ಮಾಡಿದ್ದಾರೆ.ಇನ್ನು ಸಿನಿಮಾದಲ್ಲಿ ಅಭಿನಯಿಸುತ್ತಾ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ ಅಂತಾಸೋನಾಕ್ಷಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಅಭಿಮಾನಿಗಳಂತೂ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತಾ ಕಾಯುತ್ತಾ ಕುಳಿತಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ