ಶೀಫ್ರದಲ್ಲೇ ನಾಗ ಚೈತನ್ಯ ಸಮಂತಾ ಮದುವೆ ?

ಶುಕ್ರವಾರ, 24 ಜೂನ್ 2016 (14:51 IST)
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಹಾಗೂ ನಾಗಚೈತನ್ಯ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಲೆಟೆಸ್ಟ್ ನ್ಯೂಸ್ ಏನೆಂದರೆ ನಾಗಚೈತನ್ಯ ಹಾಗೂ ಸಮಂತಾ ಇಬ್ಬರು ಲೀವಿಂಗ್ ಟುಗೆದರ್‌ನಲ್ಲಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. 


ನಟ ನಾಗಾರ್ಜುನ ಪುತ್ರನಾಗಿರುವ ನಾಗ ಚೈತನ್ಯ ಮನಂ ಸಿನಿಮಾದಲ್ಲಿ ಸಮಂತಾ ಜತೆಗೆ ನಟಿಸಿದ್ದರು. ಇದರ ಜತೆಗೆ ಸಮಂತಾ ಜತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ಸದ್ಯ ಲಿವೀಂಗ್ ಟುಗೆದರ್‌ನಲ್ಲಿರುವ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಗಚಿಬೌಲಿಯಲ್ಲಿರುವ ನಾಗಚೈತನ್ಯ ಫ್ಲಾಟ್‌ಲ್ಲಿ ಸಮಂತಾ ಒಟ್ಟಿಗೆ ಇದ್ದಾರಂತೆ. ಇವರಿಬ್ಬರು ಲಿವಿಂಗ್ ಟುಗೆದರ್‌ನಲ್ಲಿ ಇದ್ದಾರೆ ಎಂದು ಹೇಳಲಾಗ್ತಿದೆ. ಇದರ ಜತೆಗೆ ಸಮಂತಾ ಪಾರ್ಕ್ ಹ್ಯಾಟ್‌ನಲ್ಲಿ ಮನೆಯನ್ನು ಬಿಟ್ಟು ನಾಗ ಚೈತನ್ಯ ಜತೆ ಹೊಟೇಲ್‌ನಲ್ಲಿ ಇದ್ದಾರೆ ಎನ್ನಲಾಗಿದೆ.

ತಮಿಳು ಹಾಗೂ ತೆಲಗು ಚಿತ್ರಗಳಲ್ಲಿ ನಟಿಸಿರುವ ಸಮಂತಾ ಪ್ರಭು ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.. ಕಳೆದ ಒಂದು ವರ್ಷದಲ್ಲಿ ಅವರು ಇದುವರೆಗೂ 6 ಚಿತ್ರಗಳಲ್ಲಿ ನಟಿಸಿದ್ದಾರೆ.ಹಲವು ಸೌತ್ ಇಂಡಿಯನ್ ಹಿರೋಗಳ ಜತೆಗೆ ನಟಿಸಿದ್ದಾಳೆ ಸಮಂತಾ.. ಆದ್ರೆ ಸಮಂತಾ ಆ್ಯಕ್ಟಿಂಗ್‌ನಿಂದ ದೂರ ಉಳಿಯುತ್ತಾರಾ ಗೊತ್ತಿಲ್ಲ. ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ ಬ್ರಹ್ಮೋತ್ಸವಂನಲ್ಲಿ ಮಹೇಶ್ ಬಾಬು ಜೊತೆ ಸಮಂತಾ ಪ್ರಭು, ಕಾಜಲ್ ಕಾಣಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ