ಜನರ ಗಮನ ಸೆಳೆಯುತ್ತಿರುವ ಅರ್ಜುನ್ ಕಪೂರ್ ಸೂಪರ್ ಮ್ಯಾನ್

ಶುಕ್ರವಾರ, 28 ನವೆಂಬರ್ 2014 (11:58 IST)
ಬಾಲಿವುಡ್ ನಲ್ಲಿ ಬೋನಿ ಕಪೂರ್ ಅವರ ಮಗನಾಗಿದ್ದರು, ತಂದೆಯ ಸಹಾಯ ಇಲ್ಲದೆ  ಬೆಳೆಯುತ್ತಿರುವ ಕಲಾವಿದ ಅರ್ಜುನ್ ಕಪೂರ್. ಅವರು ನಟಿಸಿರುವ ಚಿತ್ರಗಳು ಯಶಸ್ವಿ ಆಗಿರುವುದಲ್ಲದೆ ಬಾಲಿವುಡ್ ನಲ್ಲಿ ಒಳ್ಳೆಯ ಸ್ಥಾನ ನೀಡಿದೆ. ಅರ್ಜುನ್ ಅವರ  ತೇವರ್ ಚಿತ್ರ ಈಗ ಹೆಚ್ಚು ಸುದ್ದಿ ಮಾಡುತ್ತಿದೆ. ಬಿಡುಗಡೆಗೆ ಮುನ್ನವೇ ಸುದ್ದಿ ಹೇಗೆ ಮಾಡಲು ಸಾಧ್ಯ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಆ ಚಿತ್ರದ ಹಾಡೊಂದು ಸಿಕ್ಕಾಪಟ್ಟೆ ಹೆಸರು ಮಾಡುತ್ತಿದೆ. 







ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಹೆಸರನ್ನು ಬಳಸಿಕೊಂಡು ಸಿದ್ಧ ಮಾಡಿರುವ ಸೂಪರ್ ಮ್ಯಾನ್ ಹಾಡು ಈಗ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ಇಷ್ಟ ಆಗಿದೆಯಂತೆ ಜನರಿಗೆ. ಆ ಹಾಡು ಅತ್ಯಂತ ಚಂದ ಇದ್ದು, ಕೇಳುಗರ ಕಿವಿಗೆ ಇಂಪಾಗಿದ್ದು ಎಲ್ಲರನ್ನು ಆಕರ್ಷಿಸುತ್ತಿದೆಯಂತೆ. ಸಂಗೀತ ನಿರ್ದೇಶಕರಾದ ಸಾಜಿದ್- ವಾಜಿದ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. 
 
ಕೌಸರ್ ಮುನೀರ್, ದನೀಶ್ ದಬರಿ ಮತ್ತು  ಸಾಜಿದ್  ಸಾಹಿತ್ಯ ಮತ್ತು ವಾಜಿದ್ ಗಾಯನ ಈ ಹಾಡಿನ ಮುಖ್ಯ ಸಂಗತಿಯಾಗಿದೆ. ಟೆಕ್ನೋ ಬೀಟ್ ಕಾನ್ಸೆಪ್ಟ್ ಹೊಂದಿರುವ ಸುಪರ್ ಮ್ಯಾನ್ ಹಾಡು ಎಲ್ಲರ ಗಮನ ಸೆಳೆದಿದೆ. ಈ ಚಿತ್ರವನ್ನು ಅಮಿತ್ ನಿರ್ದೇಶಿಸಿದ್ದಾರೆ. ತೇವರ್ ನಲ್ಲಿ ಸೋನಾಕ್ಷಿ ಸಿನ್ಹ ಮತ್ತು ಮನೋಜ್ ಬಾಜಪೇಯಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. 
 

ವೆಬ್ದುನಿಯಾವನ್ನು ಓದಿ