ನಾನು ಕರೀನಾ ಕಪೂರ್ ಅವರ ಅಭಿಮಾನಿ- ಅರ್ಜುನ್ ಕಪೂರ್

ಸೋಮವಾರ, 8 ಫೆಬ್ರವರಿ 2016 (11:02 IST)
ನಟ ಅರ್ಜುನ್ ಕಪೂರ್ ಹಾಗೂ ಕರೀನಾ ಕಪೂರ್ ಕೀ ಆಂಡ್ ಕ ಸಿನಿಮಾದಲ್ಲಿ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರಿ ಬಗ್ಗೆ ಈಗಾಗಲೇ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಹೀಗಿರುವಾಗಲೇ ಅರ್ಜುನ್ ಎಲ್ಲರೂ ಅಚ್ಚರಿ ಪಡುವಂತಹ ಸಂಗತಿಯೊಂದನ್ನು ಹೊರ ಹಾಕಿದ್ದಾರೆ.

ಹೌದು... ಕೀ ಆಂಡ್ ಕ ಸಿನಿಮಾದಲ್ಲಿ ಅರ್ಜುನ್ ಹಾಗೂ ಕರೀನಾ ಕಪೂರ್ ಗಂಡ ಹೆಂಡತಿ.ಆದ್ರೆ ನಿಜ ಜೀವನದಲ್ಲಿ ನಾನು ಕರೀನಾ ಕಪೂರ್ ಅವರ ಅಬಿಮಾನಿ ಅಂತಾ ಅರ್ಜುನ್ ಹೇಳಿದ್ದಾರೆ. ಕರೀನಾ ಕಪೂರ್ ಅವರು ಒಬ್ಬ ಅದ್ಭುತ ನಟಿ. ಅವರ ಜೊತೆ ಅಭಿನಯಿಸೋದು ನನಗೆ ತುಂಬಾ ಹೆಮ್ಮೆ ಅನ್ನಿಸುತ್ತೆ. ನಿಜವಾಗಲೂ ನಾನು ಅವರ ಅಭಿಮಾನಿ ಅಂತಾ ಅವರು ಹೇಳಿದ್ದಾರೆ. ನಾನು ಅವರೊಂದಿಗೆ ಅಭಿನಯಿಸುವ ಮೊದಲು ಆ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದೆ.ಆದ್ರೀಗ ಆ ದಿನ ಬಂದಿದೆ. ನಿಜವಾಗಿಯೂ ನಾನು ತುಂಬಾ ಖುಷಿಯಾಗಿದ್ದೇನೆ ಅಂದಿದ್ದಾರೆ ಅರ್ಜುನ್.
 
ಅರ್ಜುನ್ ಕಪೂರ್ ಅವರು ಸಿನಿಮಾದಲ್ಲಿ ಕರೀನಾ ಕಪೂರ್ ಅವರ ಗಂಡನಾಗಿ ಕಾಣಿಸಿಕೊಂಡಿದ್ದಾರೆ.ಅಂದ್ಹಾಗೆ ಆರ್ ಬಾಲ್ಕಿ  ಈ ಸಿನಿಮಾವನ್ನು ನಿರ್ದೇಶಿಸಿದ್ದು ಇದು ಲಿಂಗ ಸಮಾನತೆಯ ಕುರಿತಾದ ಸಿನಿಮಾವಾಗಿದೆ. ಸಿನಿಮಾದಲ್ಲಿ ಕರೀನಾ ಅವರು ಹೊರಗಡೆ ಹೋಗಿ ದುಡಿಯುವ ಹೆಣ್ಣು ಮಗಳಾಗಿ ಕಾಣಿಸಿಕೊಂಡ್ರೆ ಅರ್ಜುನ್ ಮನೆಯಲ್ಲಿರೋ ಪತಿಯಾಗಿ ಅಭಿನಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ