ನಾನು ನಾಲ್ಕು ರಾಜ್ಯದ ಮಗ: ರಾಜಮೌಳಿ

ಮಂಗಳವಾರ, 26 ಜನವರಿ 2016 (16:21 IST)
ಬಾಹುಬಲಿ ಸಿನಿಮಾದ ಮೂಲಕ ವಿಶ್ವದಾದ್ಯಂತ ಸುದ್ದಿಯಾದ ನಿರ್ದೇಶಕ ಎಸ್‍ಎಸ್ ರಾಜಮೌಳಿ ಪದ್ಮಶ್ರೀ ಪ್ರಶಸ್ತಿ ಪಡೆಯಲು ನಾನು ಯೋಗ್ಯ ವ್ಯಕ್ತಿಯಲ್ಲ. ಪದ್ಮಶ್ರೀ ಪಟ್ಟಿಯಲ್ಲಿ ಹೆಸರು ಪ್ರಕಟಗೊಂಡಾಗ ನನಗೆ ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ.
ಈ ಗೌರವಕ್ಕೆ ಗೌರವಕ್ಕೆ ಅರ್ಹನಾಗುವಂತಹ ಯಾವುದೇ ಕಲಾತ್ಮಕ ಪ್ರತಿಭೆಯನ್ನು  ನಾನು ತೋರಿಲ್ಲ. ಪದ್ಮಶ್ರೀ ವಿಜೇತರ ಪಟ್ಟಿಯಲ್ಲಿ ನನ್ನ ಹೆಸರು ನೋಡಿ ಆಶ್ಚರ್ಯವಾಯಿತು ಎಂದು ಕರ್ನಾಟಕ ಮೂಲದ ರಾಜಮೌಳಿ ಹೇಳಿದ್ದಾರೆ.
 
ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿರುವ ರಾಜಮೌಳಿ ಈ ಕುರಿತು ಈ ಸಂಬಂಧ ಟ್ಟಿಟ್ಟರ್ ಮತ್ತು ಫೇಸ್‍ಬುಕ್‍ನಲ್ಲಿ ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ. ಕಳೆದ ವರ್ಷ ಆಂಧ್ರ ಪ್ರದೇಶ ಸರ್ಕಾರ ನನ್ನ ಹೆಸರನ್ನು ಶಿಫಾರಸು ಮಾಡಲು ಮುಂದಾದಾಗ ನಾನೇ ತಡೆದಿದ್ದೆ. ಈ ವರ್ಷ ಪ್ರಶಸ್ತಿ ವಿಚಾರದಲ್ಲಿ ನನ್ನನ್ನು ಯಾರು ಸಂಪರ್ಕಿಸಿಲ್ಲ. ಆದರೆ ಈಗ ಕರ್ನಾಟಕದ ಕೋಟಾದಲ್ಲಿ ನನ್ನನ್ನು ಆಯ್ಕೆ ಮಾಡಿದಾಗ ನನಗೆ ಆಶ್ಟರ್ಯವನ್ನುಂಟು ಮಾಡಿದೆ. ರಾಮೋಜಿ ರಾವ್ ಮತ್ತು ರಜನಿಕಾಂತ್ ಅವರ ಸಾಧನೆ ಅಗಣಿತವಾದುದು. ಅವರನ್ನು ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿರುವುದರಲ್ಲಿ ಅರ್ಥವಿದೆ. ಆದರೆ ನಾನು ಅಷ್ಟು ದೊಡ್ಡ ಸಾಧನೆ ಮಾಡಿಲ್ಲ ಎಂದು ಹೇಳಿದ್ದಾರೆ.
 
ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಓದಿದ್ದು ಅಂಧ್ರದಲ್ಲಿ, ಕೆಲಸ ಮಾಡಿದ್ದು ತಮಿಳುನಾಡಿನಲ್ಲಿ, ಈಗ ವಾಸವಾಗಿರುವುದು ತೆಲಂಗಾಣದಲ್ಲಿ. ಹೀಗಾಗಿ ನಾನು ಈ ಎಲ್ಲ  ನಾಲ್ಕು ರಾಜ್ಯಗಳ ಮಗ ಎಂದು ಹೇಳಲು ಸಂತೋಷವಾಗುತ್ತದೆ ಎಂದು ಅವರು ಬರೆದಿದ್ದಾರೆ.
 
ತಮ್ಮನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಅವರು ಸರ್ಕಾರಕ್ಕೆ ಕೃತಜ್ಞತೆಯನ್ನು ಕೂಡ ಸಲ್ಲಿಸಿದ್ದಾರೆ.
 
ರಾಜಮೌಳಿ ಕರ್ನಾಟಕದ ರಾಯಚೂರಿನಲ್ಲಿ ಅಕ್ಟೋಬರ್ 1೦, 1973 ರಂದು ಜನಿಸಿದ್ದರು. 

ವೆಬ್ದುನಿಯಾವನ್ನು ಓದಿ