ತಿಮ್ಮಪ್ಪನ ಮೊರೆ ಹೋದ ಬಾಲಿವುಡ್ ಬಾದ್ ಷಾ ಶಾರುಖ್‌ ಖಾನ್

ಬುಧವಾರ, 6 ಸೆಪ್ಟಂಬರ್ 2023 (15:50 IST)
ಬಾಲಿವುಡ್ ನಟ ಶಾರುಖ್ ಖಾನ್ ಅಭಿಮಾನಿಗಳು ಜವಾನ್ ಸಿನಿಮಾವನ್ನ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದೇ ಸೆಪ್ಟೆಂಬರ್ 7ರಂದು ಜವಾನ್ ಸಿನಿಮಾ ಜಗತ್ತಿನಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ. ಜವಾನ್ ರಿಲೀಸ್ಗೂ ಮುನ್ನ ಪ್ರಮೋಷನ್ನಲ್ಲಿ ಬ್ಯುಸಿಯಾಗಿರೋ ನಟ ಶಾರುಖ್ ಖಾನ್ ಇಂದು ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಬೆಳ್ಳಂಬೆಳಗ್ಗೆ ಜವಾನ್ ಚಿತ್ರತಂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದೆ. ನಟ ಶಾರುಖ್ ಖಾನ್, ಅವರ ಪುತ್ರಿ ಸುಹಾನ್ ಖಾನ್, ನಟಿ ನಯನಾ ತಾರಾ ದಂಪತಿ ಇಂದು ತಿರುಮಲಕ್ಕೆ ಭೇಟಿ ಕೊಟ್ಟಿದ್ರು. ತಿಮ್ಮಪ್ಪನ ದರ್ಶನ ಪಡೆದು ಬಂದ ಶಾರುಖ್ ಖಾನ್ ಅಭಿಮಾನಿಗಳತ್ತ ಕೈ ಬೀಸಿ ತೆರಳಿದರು.ಇನ್ನು ಜವಾನ್ ಸಿನಿಮಾ ಬಿಡುಗಡೆಗೆ ಎರಡೇ ದಿನ ಬಾಕಿ ಇರುವಂತೆ ಇಡೀ ಚಿತ್ರತಂಡ ತಿರುಪತಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ