ಆದಿಪುರುಷ್ ಸಿನಿಮಾ ಸಕ್ಸಸ್ ಗೆ ತಿಮ್ಮಪ್ಪನ ಮೊರೆ ಹೋದ ಪ್ರಭಾಸ್

ಮಂಗಳವಾರ, 6 ಜೂನ್ 2023 (16:49 IST)
Photo Courtesy: Twitter
ಹೈದರಾಬಾದ್: ಆದಿಪುರುಷ್ ಸಿನಿಮಾ ಪ್ರಿ ರಿಲೀಸ್ ಈವೆಂಟ್ ಇಂದು ಸಂಜೆ ತಿರುಪತಿಯಲ್ಲಿ ನಡೆಯಲಿದ್ದು, ಇದಕ್ಕೂ ಮೊದಲು ಹೀರೋ ಪ್ರಭಾಸ್ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಇಂದು ಸಂಜೆ ನಡೆಯಲಿರುವ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ. ಪ್ರಭಾಸ್ ಸಿನಿಮಾವೆಂದರೆ ಅಭಿಮಾನಿಗಳಲ್ಲಿ ವಿಶೇಷ ನಿರೀಕ್ಷೆಯಿರುತ್ತದೆ.

ಸಿನಿಮಾ ಜೂನ್ 16 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಸಕ್ಸಸ್ ಗಾಗಿ ಪ್ರಭಾಸ್ ಇಂದು ತಿರುಪತಿ ದೇವಾಲಯದ ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ