ಭಿನ್ನವಾದ ಪಾತ್ರಗಳು, ಗ್ಲಾಮರ್ ಇರುವ ಚಿತ್ರಗಳಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯಿಸುತ್ತಾ ಬಂದಿದ್ದಾರೆ. ಡರ್ಟಿ ಪಿಕ್ಚರ್, ಕಹಾನಿ, ಕಹಾನಿ 2 ಚಿತ್ರಗಳೆ ಇದಕ್ಕೆ ನಿದರ್ಶನ. ಇದೀಗ ಅವರು ’ಬೇಗಂ ಜಾನ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಅವರದು ವೇಶ್ಯಾವಾಟಿಕೆ ನಿರ್ವಾಹಕಿಯಾಗಿ ಕಾಣಿಸುತ್ತಿರುವುದು ವಿಶೇಷ.
ಬಂಗಾಳಿ ನಿರ್ದೇಶಕ ಶ್ರೀಜಿತ್ ಮುಖರ್ಜಿ ಬಾಲಿವುಡ್‍ನಲ್ಲಿ ಆಕ್ಷನ್ ಕಟ್ ಹೇಳುತ್ತಿರುವ ಮೊದಲ ಚಿತ್ರವಿದು. ಬಂಗಾಳಿಯಲ್ಲಿ ರಾಜ್ ಕಹಿನ್ ಹೆಸರಿನಲ್ಲಿ ಶ್ರೀಜಿತ್ ಆಕ್ಷನ್ ಕಟ್ ಹೇಳಿರುವ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದ ಪಾತ್ರವರ್ಗದಲ್ಲಿ ನಾಸಿರುದ್ದೀನ್ ಶಾ, ರಾಜೇಶ್ ಶರ್ಮಾ, ಗೋಹರ್ ಖಾನ್, ಪಲ್ಲವಿ ಶಾರದ ಮುಂತಾದರು ಮುಖ್ಯಭೂಮಿಕೆಯಲ್ಲಿದ್ದಾರೆ. ಮಾರ್ಚ್ ವೇಳೆಗೆ ಬೇಗಂ ಜಾನ್ ಚಿತ್ರ ತೆರೆಕಾಣಲಿದೆ.