ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ
ಬಹಳ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರು ಮೂಲದ ಪ್ರತಿಭಾವಂತ ನಟ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಜನ ಮನ ಗೆದ್ದಿದ್ದರು.
ಕೆಜಿಎಫ್, ಉಳಿದವರು ಕಂಡಂತೆ, ಕಿಚ್ಚ, ಕಿರಿಕ್ ಪಾರ್ಟಿ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಜನರ ಗಮನ ಸೆಳೆದಿದ್ದರು. ರಂಗಭೂಮಿಯಲ್ಲೂ ಹೆಸರು ಮಾಡಿದ್ದ ಅವರು ತಮ್ಮ ನೈಜ ಅಭಿನಯದಿಂದ ಜನರ ಮನಸ್ಸು ಗೆದ್ದಿದ್ದರು.