ಪಿ.ಟಿ ಉಷಾ ಜೀವನಾಧಾರಿತ ಚಿತ್ರವಾಗಲೇಬೇಕು : ಸೋನಮ್ ಕಪೂರ್

ಬುಧವಾರ, 24 ಆಗಸ್ಟ್ 2016 (13:51 IST)
ಪಿ.ಟಿ ಉಷಾ ಜೀವನಾಧಾರಿತ ಚಿತ್ರವಾಗಲೇಬೇಕು ಎಂದು ಬಾಲಿವುಡ್ ನಟಿ ಸೋನಮ್ ಕಪೂರ್  ತಿಳಿಸಿದ್ದಾರೆ. ಸೆಲೆಬ್ರಿಟಿ ಗೋಲ್ಡನ್ ಜೂಬ್ಲಿ ಸಮಾರಂಭದ ವೇಳೆ ಮಾತನಾಡಿದ ಸೋನಮ್, ಇತ್ತೀಚೆಗೆ ಅಥ್ಲೇಟಿಗಳು ಸಾಧನೆ ಮಾಡುತ್ತಿದ್ದಾರೆ ಅವರ ಬಗ್ಗೆ ಚಿತ್ರವಾಗಬೇಕು. ಅಲ್ಲದೇ ಪಿ.ಟಿ ಉಷಾ ಸಿನಿಮಾವಂತು ಆಗಲೆಬೇಕು ಎಂದು ತಿಳಿಸಿದ್ದಾರೆ. 

 
ನಾವು ಅಥ್ಲೇಟಿಗಳ ಸಕ್ಸೆಸ್ ಬಗ್ಗೆ ಸೆಲೆಬ್ರೆಟ್ ಮಾಡುತ್ತೇವೆ. ಇನ್ನೂ ಕ್ರೀಡಾಪಟು ಮಿಲ್ಖಾ ಸಿಂಗ್ ಕುರಿತು ಜೀವನಾಧಾರಿತ ಚಿತ್ರವಾಗಬೇಕು ಎಂದು ಸೋನಮ್ ಹೇಳಿದ್ದಾರೆ.

'ಪ್ರೇಮ್ ರತನ್ ಧನ ಪಾಯೋ' ಅಂತ ಸಲ್ಮಾನ್ ಜೊತೆಗೆ ಡ್ಯೋಯೆಟ್ ಹಾಡಿದ್ದ ಸೋನಂ ಕಪೂರ್ ನಿರ್ಜಾ ಚಿತ್ರದ ಮೂಲಕ ಫೇಮಸ್ ಆದರು.
 
ಸೋನಮ್ ಕಪೂರ್ ಅಭಿನಯದ ನಿರ್ಜಾ ಚಿತ್ರ ಸಾಕಷ್ಟು ಸುದ್ದಿ ಮಾಡಿತ್ತು. ನಿರ್ಜಾ ಭಾನೋತ್ ಅವರ ಕಥೆ ಆಧಾರಿತವಾಗಿದ್ದು, ಕರಾಚಿಯಲ್ಲಿ ವಿಮಾನವನ್ನು ಹೈಜಾಕ್ ಮಾಡಲಾಗಿತ್ತು. ಆ ವೇಳೆ ತನ್ನ ಪ್ರಾಣವನ್ನು ಲೆಕ್ಕಿಸದೇ ನಿರ್ಜಾ ವಿಮಾನದಲ್ಲಿದ್ದವರನ್ನು ರಕ್ಷಣೆ ಮಾಡಿದ್ದಳು ನಿರ್ಜಾ.
 
ಇನ್ನೂ 'ವೀರ್ ದಿ ವೆಡ್ಡಿಂಗ್' ಚಿತ್ರದಲ್ಲಿ ಸೋನಮ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸೋನಮ್ ಜತೆಗೆ ಕರೀನಾ ಕಪೂರ್ ಕೂಡ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ವೀರ್ ದಿ ವೆಡ್ಡಿಂಗ್ ಶೂಟಿಂಗ್ ಆರಂಭವಾಗಿದ್ದು, ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾಳೆ ಸೋನಮ್ ಕಪೂರ್.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ